Featured
ಯಡಿಯೂರಪ್ಪ ನಿಮಗೆ ವಯಸ್ಸಾಗಿದೆ ಬಿಟ್ಟುಹೋಗಿ.. ನಾವು ಅಭಿವೃದ್ಧಿ ಮಾಡ್ತೀವಿ..! ಸಿದ್ದು ಮಾತಿನ ಅರ್ಥವೇನು..?

ವಿಜಯಪುರ : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ವಿಜಯಪುರದ ಜನಜಾಗೃತಿ ಸಮಾವೇಶದಲ್ಲಿ ಮಾತ್ನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನಗಳ ಲೆಕ್ಕದಲ್ಲಿ ಸೋತಿದೆ. ಆದ್ರೆ, ಶೇಕಡಾವಾರು ಮತಗಳಲ್ಲಿ ಕಾಂಗ್ರೆಸ್ ಗೆದ್ದಿದೆ. 104 ಸ್ಥಾನಗಳಲ್ಲಿ ಗೆದ್ದು ಜನಾಶೀರ್ವಾದ ವಿದೆ ಅಂತಾ ಹೇಳುವ, ಯಡಿಯೂರಪ್ಪ ಸರ್ಕಾರ ಅನೈತಿಕವಾದದ್ದು. ಅನೈತಿಕವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ನಾನು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜನರೇ ಹೇಳ್ತಿದಾರೆ. ಮತ್ತೆ ನೀವು ಅಧಿಕಾರಕ್ಕೆ ಬರಬೇಕು, ಬರ್ತಿರಾ ಅಂತಿದ್ದಾರೆ. ಯಾವುದೇ ಹಳ್ಳಿಗೆ ಹೋದ್ರೂ ಅಕ್ಕಿ, ಹಾಲು, ವಿದ್ಯಾಸಿರಿ, ಮಾತೃಪೂರ್ಣ, ಶೂಭಾಗ್ಯ ಕೊಟ್ಟವರು ನೀವೇ ಅಂತಿದ್ದಾರೆ. ಹಾಗಿದ್ರೆ, ಯಡಿಯೂರಪ್ಪ ನೀವೇನು ಮಾಡಿದ್ರಿ..? ಎಂದು ಸಿದ್ದು ಕಿಚಾಯಿಸಿದ್ದಾರೆ. ನೂರು ದಿನ ತುಂಬಿದಾಗ ಕರ್ನಾಟಕದ ಚಿತ್ರ ಬದಲಾವಣೆ ಮಾಡ್ತೇನೆ ಎಂದ ಯಡಿಯೂರಪ್ಪಗೆ ಸಿದ್ದು ಸವಾಲ್ ಹಾಕಿದ್ದಾರೆ.
ಮೂರು ವರ್ಷ ಸಿಎಂ ಆಗಿದ್ದಾಗ ನೀವೇನು ಮಾಡಿದ್ರಿ..? ತಂತಿ ಮೇಲೆ ನಡೆಯುವ ನೀವು ಹೇಗೆ ಅಭಿವೃದ್ಧಿ ಮಾಡ್ತೀರಿ..? ಪಾಪ ವಯಸ್ಸಾಗಿದೆ ಬಿಟ್ಟು ಬಿಡ್ತೀರಾ..? ಬಿಟ್ಟುಹೋಗಿ ನಾವು ಅಭಿವೃದ್ಧಿ ಮಾಡ್ತೇವೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯ ಕೊಟ್ಟ ಅಕ್ಕಿಯನ್ನು ಮೋದಿ ಕೊಟ್ಟಿದ್ದು ಎಂದು ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ. ಬಿಜೆಪಿ ಸರ್ಕಾರ ಎಲ್ಲೆಲ್ಲಿ ಇದೆ. ಅಲ್ಲೆಲ್ಲಾ ಯಾಕೆ ಏಳು ಕೇಜಿ ಉಚಿತ ಅಕ್ಕಿ ಕೊಟ್ಟಿಲ್ಲ. ಇದ್ರೆ ತೋರಿಸಿ ಯಡಿಯೂರಪ್ಪ ಎಂದು ಸಿದ್ದು ಸವಾಲ್ ಹಾಕಿದ್ರು.
ಉಚಿತ ಅಕ್ಕಿ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ಅಲ್ಲ. ಅದು ನಾವು ಕೊಟ್ಟಿದ್ದು. ಯಾರೂ ಹಸಿದಿರಬಾರದು ಎಂದು ಕೊಟ್ಟಿದ್ದು. ಬಡವರಿಗೆ ಅಕ್ಕಿ ಕೊಡಬೇಕು ಎಂದು ಫುಡ್ ಸೆಕ್ಯೂರಿಟಿ ಆಕ್ಟ್ ತಂದವರು ಮನಮೋಹನ ಸಿಂಗ್ ಎಂದ ಸಿದ್ದರಾಮಯ್ಯ, ತಮ್ಮ ಭಾಷಣದ ಉದ್ದಕ್ಕೂ ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ರು..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















