Featured
50 ಲಕ್ಷಕ್ಕೆ ಅನರ್ಹ ಶಾಸಕ ನಾರಾಯಣಗೌಡ ಹತ್ಯೆಗೆ ಸಪಾರಿ..? ಸ್ವತಃ ನಾರಾಯಣಗೌಡರು ಹೇಳಿದ್ದೇನು..?

ಮಂಡ್ಯ : ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡರ ಹತ್ಯೆಗೆ ಸಂಚು ನಡೆದಿತ್ತಾ..? ಈ ಪ್ರಶ್ನೆಗೆ ಹೌದು ಅಂತ ಸ್ವತಃ ಅನರ್ಹ ಶಾಸಕ ನಾರಾಯಣಗೌಡರೇ ಹೇಳಿದ್ದಾರೆ. ಮಂಡ್ಯದಲ್ಲಿ ಮಾತ್ನಾಡಿದ ಅವರು, ತನ್ನ ಹತ್ಯೆಗೆ ನಡೆದಿರೋ ಸಂಚಿನ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ರು. ನಾರಾಯಣಗೌಡರನ್ನ ಹೊಡೆದು ಹಾಕಬೇಕು ಅಂತ 50 ಲಕ್ಷಕ್ಕೆ ಸುಪಾರಿ ನೀಡಿದ್ರು. ಆದ್ರೆ, ಆ ಭಗವಂತನ ಕೃಪೆ, ಶಕ್ತಿಯಿಂದ ಅದು ಸಾಧ್ಯವಾಗಿಲ್ಲ ಎಂದು ನಾರಾಯಣಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ವಿಶ್ವದಲ್ಲೇ ಕುಖ್ಯಾತಿ ಪಡೆದಿರೋ ದಾವೂದ್, ಚೋಟಾ ರಾಜನ್ ಅವರಿಂದಲೇ ಹೊಡೆಯೋಕೆ ಆಗಲಿಲ್ಲ. ಭಗವಂತನ ಆಶೀರ್ವಾದ ನಮ್ಮ ಮೇಲಿದೆ. ನನಗೆ ಸುಪಾರಿ ಕೊಟ್ಟ ಸುದ್ದಿ ಗೊತ್ತ ದಿನದಿಂದಲೇ ನಾನು ಗನ್ ಮ್ಯಾನ್ ಕೂಡ ಬಿಟ್ಟಿದ್ದೀನಿ. ನಿಮ್ಮ ಆಶೀರ್ವಾದ ಇದ್ರೆ ಸಾಕು, ಯಾರಿಗೂ ಭಯ ಪಡಲ್ಲ ಎಂದು ಹೇಳಿದ್ದಾರೆ.
ಕೆಟ್ಟೋರು ಕೆಟ್ಟೋರೇ. ಈ ತಾಲೂಕಿನಲ್ಲಿ ಯಾರು ಕೆಟ್ಟವರು, ಲೂಟಿ ಮಾಡಿದವರು ಯಾರು ಅನ್ನೋದು ಜನಕ್ಕೆ ಗೊತ್ತಿದೆ. ಲೂಟಿಕೋರರಿಗೆ, ಕೆಟ್ಟವರಿಗೆ ಪಾಠ ಕಲಿಸೋದೆ ನನ್ನ ಗುರಿ ಎಂದು ಪರೋಕ್ಷವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಟಾಂಕ್ ಕೊಟ್ರು. ನಾನು ಯಾರಿಗೂ ಯಾವ ಕಾರಣಕ್ಕೂ ಹೆದರಲ್ಲ, ಹೆದರುವ ಪ್ರಶ್ನೆಯೇ ಇಲ್ಲ ಎಂದು ನಾರಾಯಣಗೌಡರು ಹೇಳಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















