Connect with us

Featured

ಡಯಾಬಿಟಿಸ್ ಇದೆಯಾ..? ಹಾಗಿದ್ರೆ, ಶೀತಕಾಲದಲ್ಲಿ ಈ ಹಣ್ಣುಗಳನ್ನ ಟ್ರೈ ಮಾಡಿ..!

ರೈಸಿಂಗ್ ಕನ್ನಡ : ರಕ್ತದಲ್ಲಿ ಶುಗರ್ ಲೆವಲ್ ಜಾಸ್ತಿ ಇದ್ದರೆ ಏನಾದರೊಂದು ತೊಂದರೆಯಾಗುತ್ತೆ. ಆದ್ರೆ, ಶೀತಕಾಲದಲ್ಲಿ ಕೆಲವು ರೀತಿಯ ಹಣ್ಣುಗಳನ್ನ ತಿನ್ನೋದ್ರಿಂದ ಡಯಾಬಿಟಿಸ್ ಕಡಿಮೆಯಾಗುತ್ತೆ ಅಂತಾರೆ ವೈದ್ಯರು ಹಾಗೂ ವಿಜ್ಞಾನಿಗಳು.

ಪ್ರಪಂಚದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಲೆ ಹೋಗುತ್ತಿದೆ. ಜಗತ್ತಿನಲ್ಲಿರೋ ಡಯಾಬಿಟಿಸ್ ರೋಗಿಗಳು ಚೀನಾ, ಭಾರತದಲ್ಲೇ ಹೆಚ್ಚಿದ್ದಾರೆ. ನಿಮಗೆ ಗೊತ್ತಿರುವ ಯಾರಿಗಾದರೂ ಡಯಾಬಿಟಿಸ್​ ಇದ್ರೆ, ಮೊದಲು ವ್ಯಾಯಾಮ ಮಾಡುವುದಕ್ಕೆ ಹೇಳಿ. ಡಯಾಬಿಟಿಸ್ ಕಂಟ್ರೋಲ್​​ನಲ್ಲಿ ಇರಬೇಕಾದ್ರೆ, ಉಪ್ಪು ಜಾಸ್ತಿ ಬಳಸುವ ಊಟ, ತಿಂಡಿಗಳಿಂದ ದೂರವಿರಬೇಕು. ಕುರುಕಲು ತಿಂಡಿ ಬೇಡ. ಇದರ ಬದಲು  ಫೈಬರ್ ಜಾಸ್ತಿ ಇರುವ, ಕಾರ್ಬೋಹೈಡ್ರೆಡ್ಸ್​​ ಚೆನ್ನಾಗಿ ತಿನ್ನಬೇಕು.

ಹಾಗಿದ್ರೆ ಯಾವೆಲ್ಲಾ ಹಣ್ಣುಗಳನ್ನ ತಿಂದ್ರೆ, ಮಧುಮೇಹ ಅಥವಾ ಡಯಾಬಿಟಿಸ್​ ಕಡಿಮೆ ಆಗುತ್ತೆ ಅನ್ನೋದನ್ನ ನೋಡೋಣ.

ಕಿತ್ತಳೆ ಹಣ್ಣು : ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತೆ. ಇದರಿಂದ ಆಂಟಿ ಆಕ್ಸಿಡೆಂಟ್​ ಹೆಚ್ಚಾಗಿದ್ದು, ಡಯಾಬಿಟಿಸ್ ರೋಗಿಗಳು ತಿಂದ್ರೆ, ಒಳ್ಳೇದು. ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೆ ಕಿತ್ತಳೆ ಹಣ್ಣು.

ಸೀಬೆಹಣ್ಣು : ಸೀಬೆಹಣ್ಣಿನಲ್ಲಿ ಫೈಬರ್ ಜಾಸ್ತಿ ಇರುತ್ತದೆ. ಫೈಬರ್ ಅನ್ನೋದು ನಾವು ತಿನ್ನುವ ಆಹಾರವನ್ನು ತಕ್ಷಣ ಜೀರ್ಣವಾಗಲು ಬಿಡುವುದಿಲ್ಲ. ಅದ್ದರಿಂದ ಶುಗರ್ ತಕ್ಷಣ ರಕ್ತದಲ್ಲಿ ಸೇರುವುದಿಲ್ಲ. ಗ್ಲೂಕೋಸ್ ಲೆವೆಲ್ಸ್ ಜಾಸ್ತಿಯಾಗುವುದಿಲ್ಲ. ಸೀಬೆಹಣ್ಣು ಡಯಾಬಿಡಿಸ್ ಇರುವವರು ತಿಂದರೂ ತೊಂದರೆಯಾಗುವುದಿಲ್ಲ.

ಕಿವಿ ಹಣ್ಣು : ಸಲ್ಪ ಹಣ ಜಾಸ್ತಿಯಾದರೂ ತುಂಬಾ ಒಳ್ಳೆಯದು ಈ ಹಣ್ಣು. ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್​​​ಗಳು ನಮ್ಮ ಶರೀರದಲ್ಲಿ ಫ್ರಿರಾಡಿಕಲ್ಸ್ ಗಳನ್ನು ಓಡಿಸಿ ಬಿಡುತ್ತವೆ. ಇದರಲ್ಲಿ ಹುಳಿ ಜಾಸ್ತಿಯಾಗಿರುತ್ತದೆ. ಆದ್ದರಿಂದ ಶೀತದ ಕಾಲದಲ್ಲಿ ಕಿವಿ  ಹಣ್ಣು ತಿಂದರೆ ತುಂಬಾ ಒಳ್ಳೆಯದು.

ಸೇಬು ಹಣ್ಣು : ಸೇಬು ಹಣ್ಣಿನಲ್ಲಿ ಫ್ರಕ್ಟೊಜ್ ಆಂಟಿ ಆಕ್ಸಿಡೆಂಟ್ ಪಾಲಿಫೆನಾಲ್ಸ್ ಇರುತ್ತದೆ. ಇವು ನಮ್ಮ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸುತ್ತವೆ. ಆದ್ದರಿಂದ ರಕ್ತದಲ್ಲಿ ಬೇಗ ಶುಗರ್ ಬೆರೆಯುವುದಿಲ್ಲ. ಟೈಪ್ -2 ಡಯಾಬಿಟಿಸ್ ಬಾರದೆ ಸೇಬು ಹಣ್ಣು ತಡೆಯುತ್ತದೆ. ಇದರಲ್ಲಿರುವ ಆಂಥೊಸಿಯಾನಿನ್,  ಈ ಪ್ರಯೊಜನವನ್ನು ಕಲ್ಪಿಸುತ್ತದೆ.

ಪೇರು ಅಥವಾ ಪಿಯರ್​ ಹಣ್ಣು : ಈ ಹಣ್ಣು ಸಲ್ಪ ದುಡ್ಡು ಜಾಸ್ತಿ. ಆದರೂ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್, ಫೈಬರ್ ಜಾಸ್ತಿಯಾಗಿರುತ್ತವೆ. ಈ ಹಣ್ಣು ಜ್ಯೂಸ್  ಮಾಡುವ ಬದಲು ಹಾಗೆ ತಿಂದರೆ ತುಂಬಾ ಒಳ್ಳೆಯದು. ಯಾಕೆಂದರೆ ಜ್ಯೂಸ್ ಮಾಡಿ ಕುಡಿಯುವುದರಿಂದ ಬೇಗನೆ ಶುಗರ್ ಲೆವೆಲ್ ಜಾಸ್ತಿಯಾಗುತ್ತದೆ.  

ಸೋ, ಇನ್ನೇನು ಶೀತ ಕಾಲ ಶುರುವಾಗ್ತಿದೆ. ನಿಮಗೆ, ನಿಮ್ಮವರಿಗೆ, ಸ್ನೇಹಿತರಿಗೆ ಡಯಾಬಿಟಿಸ್ ಲಕ್ಷಣಗಳು ಇದ್ರೆ, ಈ ಹಣ್ಣುಗಳನ್ನ ಟ್ರೈ ಮಾಡಿ  ಆರೋಗ್ಯವಾಗಿರಿ..

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ