Featured
ಸುಮಲತಾ ಬಿಜೆಪಿಗೆ ಬೆಂಬಲ ಕೊಡಲೇಬೇಕು : ಶೋಭಾ ಕರಂದ್ಲಾಜೆ ಹೀಗೆ ಹೇಳಿದ್ಯಾಕೆ..?

ಚಿಕ್ಕಮಗಳೂರು : ಬೈ ಎಲೆಕ್ಷನ್ಗೆ ದಿನಗಣನೆ ಶುರುವಾಗಿದೆ. ಈ ನಡುವೆ ಪಕ್ಷೇತರ ಸಂಸದೆ, ಸುಮಲತಾ ಯಾರಿಗೆ ಬೆಂಬಲ ಕೊಡ್ತಾರೆ ಅನ್ನೋ ಚರ್ಚೆ ಜೋರಾಗಿಯೇ ನಡೀತಿದೆ. ಕೆ.ಆರ್. ಪೇಟೆಯಲ್ಲಿ ಯಾರಿಗೆ ಬೆಂಬಲ ಕೊಡಬೇಕು ಅನ್ನೋದ್ರ ಬಗ್ಗೆ ಇನ್ನೂ ಸುಮಲತಾ ನಿರ್ಧಾರ ಮಾಡಿಲ್ಲ. ಜನ ಹೇಗೆ ಹೇಳ್ತಾರೋ ಹಾಗೇ ಕೇಳ್ತೀನಿ ಅಂತ ಸುಮಲತಾ ಹೇಳಿದ್ದಾರೆ. ಜನರೇ ನನಗೆ ಹೈಕಮಾಂಡ್ ಎನ್ನುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನಲ್ಲಿ ಮಾತ್ನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸುಮಲತಾಗೆ ನಾವು ಬಹಿರಂಗ ಬೆಂಬಲ ನೀಡಿದ್ದೆವು. ಹೀಗಾಗಿ, ಈಗ ಸುಮಲತಾ ನಮಗೆ ಬೆಂಬಲ ಕೊಡಲೇ ಬೇಕು ಎಂದಿದ್ದಾರೆ. ಆಗ ನಾವು ಬೆಂಬಲ ಕೊಟ್ಟಿದ್ವಲ್ಲ. ಈಗ ನಮಗೆ ಬೆಂಬಲ ಕೊಡುತ್ತಾರೆ ಅನ್ನುವ ವಿಶ್ವಾಸವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಆದ್ರೆ, ನಬಮಗೆ ಬೆಂಬಲಿಸಿ ಎಂದು ನಾವು ಒತ್ತಾಯ ಮಾಡೋ ಪ್ರಶ್ನೆಯೇ ಇಲ್ಲ. ಅವರೇ ಹೇಳಿದ್ದಾರೆ, ಕೇಂದ್ರ, ರಾಜ್ಯ ಸರ್ಕಾರಕ್ಕೆ ನನ್ನ ಬೆಂಬಲ ಅಂತ. ಈಗ ಏನು ಬದಲಾವಣೆ ಆಗಿದ್ಯೋ ಗೊತ್ತಿಲ್ಲ ಎನ್ನುವ ಮೂಲಕ ಹೊಸ ಕಾರ್ಡ್ ಪ್ಲೇ ಮಾಡಿದ್ದಾರೆ ಶೋಭಾ ಕರಂದ್ಲಾಜೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?