Featured
ಅಪೋಲೋ ಆಸ್ಪತ್ರೆಯಲ್ಲಿ ಡಿಕೆಶಿ : ಆರೋಗ್ಯ ಸ್ಥಿತಿಯಲ್ಲಿ ಏರುಪೇರು

ಬೆಂಗಳೂರು : ಮಾಜಿ ಸಚಿವ, ಡಿಕೆ ಶಿವಕುಮಾರ್ ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ, ತಡರಾತ್ರಿ ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ರಕ್ತದೊತ್ತಡ ಹಾಗೂ ಬೆನ್ನು ನೋವಿನಿಂದ ಡಿಕೆ ಶಿವಕುಮಾರ್ ಬಳಲುತ್ತಿದ್ರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ರು. ಆಗ ಡಾ.ಶಂಕರ್ ಅವರ ನೇತೃತ್ವದ ವೈದ್ಯರ ತಂಡ, ಡಿಕೆಶಿಗೆ ಎರಡು ಗಂಟೆಗಳ ಕಾಲ ವಿವಿಧ ಟೆಸ್ಟ್ ಗಳನ್ನು ಮಾಡಿ ತಪಾಸಣೆ ನಡೆಸಿದ್ರು.
ವೈದ್ಯಕೀಯ ಚಿಕಿತ್ಸೆ ವೇಳೆ, ಅನಾರೋಗ್ಯ ಮತ್ತಷ್ಟು ಉಲ್ಬಣಗೊಂಡ ಹಿನ್ನೆಲೆ ಡಿಕೆಶಿ ಅವರನ್ನು ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಇದೇ ವೇಳೆ,
ಡಿಕೆಶಿ ಜೊತೆ ಆಗಮಿಸಿದ್ದ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯ, ಡಿಕೆಶಿ ಆಸ್ಪತ್ರೆಗೆ ದಾಖಲಾದ ಬಳಿಕ
ಮನೆಗೆ ವಾಪಸ್ ತೆರಳಿದ್ರು. ಡಿಕೆ ಶಿವಕುಮಾರ್ ಜೊತೆ ಕುಣಿಗಲ್ ಶಾಸಕ ಹಾಗೂ ವೈದ್ಯರೂ ಆಗಿರೋ ಡಾ.
ರಂಗನಾಥ್ ಆಸ್ಪತ್ರೆಯಲ್ಲೇ ಇದ್ರು. ಬಳಿಕ, ಕೃಷ್ಣಬೈರೆಗೌಡ, ಮಾಜಿ ಶಾಸಕ ಬಾಲಕೃಷ್ಣ ಅಪೋಲೋ ಆಸ್ಪತ್ರೆಗೆ
ಆಗಮಿಸಿ ಡಿಕೆಶಿ ಆರೋಗ್ಯ ವಿಚಾರಿಸಿದ್ರು..
ಡಿಕೆ ಶಿವಕುಮಾರ್ ಆರೋಗ್ಯದ ಕುರಿತು ಮಾಹಿತಿ ನೀಡಿದ ಡಾ| ಶಂಕರ್, ಡಿಕೆಶಿ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದೆ. ಶನಿವಾರ ಡಿಕೆಶಿ ಆರೋಗ್ಯದ ಕುರಿತು ಹೆಲ್ತ್ ಬುಲ್ಲೆಟಿನ್ ಬಿಡುಗಡೆ ಮಾಡೋದಾಗಿ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?