Featured
ದರ್ಶನ್ ಒಡೆಯ ಸಿನಿಮಾದ ಟೀಸರ್ ಹೇಗಿದೆ ಗೊತ್ತಾ..? : ವಿಡಿಯೋ ಜೊತೆ ಈ ನ್ಯೂಸ್ ಓದಿ
![](https://risingkannada.com/wp-content/uploads/2019/11/darshan-odeya.jpg)
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಒಡೆಯ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಿದ್ದಾರೆ. 40 ಸೆಕೆಂಡ್ ಇರೋ ಈ ಟೀಸರ್ನಲ್ಲಿ ದರ್ಶನ್ ಡೈಲಾಗ್ಗಳೇ ಹೈಲೆಟ್ಸ್.
ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರವೇ ಆಸೆ ಪಟ್ಟು ನನ್ನನ್ನ ಇಲ್ಲಿಗೆ ಕರೆಸಿಕೊಂಡಿದೆ. ಇನ್ಮುಂದೆ ಅಧಿಕಾರನೂ ನಂದೆನೇ, ಆಜ್ಞೇನೂ ನಂದೆನೇ. ನನ್ನ ಫೇಸ್ ಮಾಡ್ಬೇಕು ಅಂದ್ರೆ, ಗುಂಡಿಗೆಯಲ್ಲಿ ಧಮ್ ಇರಬೇಕು ಅನ್ನೋ ಮಾಸ್ ಡೈಲಾಗ್ಗಳು ಟೀಸರ್ನಲ್ಲಿವೆ. ದರ್ಶನ್ ಫೈಟ್ಸ್, ಲುಕ್, ಮಾಸ್ ಎಂಟ್ರಿ ಟೀಸರ್ನಲ್ಲಿದೆ. ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದನ್ನ ಟೀಸರ್ ತೋರಿಸುತ್ತೆ.
ಒಡೆಯ ಸಿನಿಮಾದ ಟೀಸರ್ ಇಲ್ಲಿದೆ ನೋಡಿ.
ಇನ್ನು ಇವತ್ತು ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಬಿಡುಗಡೆಯಾದ ಒಡೆಯ ಟೀಸರ್, ಯೂಟ್ಯೂಬ್ನಲ್ಲಿ ಧೂಳೇಬಿಟ್ಟಿಸಿದೆ. ಕನ್ನಡದ ಯಾವ ಸ್ಟಾರ್ ನಟರಿಗೂ ಸಿಗದ ಲೈಕ್ಸ್, ವೀವ್ಸ್ ಒಡೆಯ ಸಿನಿಮಾಗೆ ಸಿಕ್ಕಿದೆ. ಕೇವಲ ಅರ್ಧ ಗಂಟೆಯಲ್ಲೇ 5 ಲಕ್ಷ ವೀವ್ಸ್ ಪಡೆದಿರೋ ಒಡೆಯ ಹೊಸ ದಾಖಲೆ ಸೃಷ್ಟಿಸಿದೆ. ದರ್ಶನ್ ಅಭಿಮಾನಿಗಳು ಒಡೆಯ ಟೀಸರ್ ನೋಡಿ, ಫುಲ್ ಖುಷಿಯಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?