Featured
ಸಿದ್ದರಾಮಯ್ಯ ಕನ್ನಡ ಪ್ರೇಮ ನೋಡಿ : ಕನ್ನಡಿಗರಿಗೆ ಸಿದ್ದು ಸಂದೇಶ ಇಲ್ಲಿದೆ ನೋಡಿ..
ರೈಸಿಂಗ್ ಕನ್ನಡ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕನ್ನಡದ ಮೇಲೆ ಇನ್ನಿಲ್ಲದ ಪ್ರೀತಿ. ಸಿಎಂ ಆಗಿದ್ದಾಗಲು ಕನ್ನಡ, ಕನ್ನಡ ಭಾಷೆ, ನಾಡು ನುಡಿ ಅಂದ್ರೆ, ಎಲ್ಲಿಲ್ಲದ ಪ್ರೀತಿ, ಪ್ರೇಮ.. ಹೀಗಾಗಿಯೇ, ಎಲ್ಲವೇ ಹೋದ್ರೂ ತಾವು ಕನ್ನಡದಲ್ಲೇ ಮಾತನಾಡ್ತಿದ್ರು. ಕನ್ನಡ ಬರಲ್ಲ ಅಂದ್ರೆ, ಕನ್ನಡ ಕಲೀರಿ ಎಂದು ಧೈರ್ಯವಾಗಿ ಯಾವುದೇ ಅಂಜಿಕೆ ಇಲ್ಲದೇ ಪತ್ರಕರ್ತರು ಸೇರಿದಂತೆ ಎಲ್ಲರಿಗೂ ಹೇಳ್ತಿದ್ರು.
ಇದೀಗ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಾಡಜನತೆಗೆ ಸಿದ್ದು ಕನ್ನಡ ಸಂದೇಶವನ್ನ ರವಾನಿಸಿದ್ದಾರೆ. ಸಿದ್ದರಾಮಯ್ಯ ಸಂದೇಶ ಏನಿದೆ ಅಂತ ನೀವೇ ನೋಡಿ..
- ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಸಮಸ್ತ ಕನ್ನಡ ಬಂಧುಗಳಿಗೆ ತುಂಬು ಹೃದಯದ ಶುಭಾಶಯಗಳು.
- ಹರಿದು ಹಂಚಿಹೋಗಿರುವ ಕನ್ನಡಿಗರು ಕನ್ನಡ ಎಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಹೆಮ್ಮೆಯ ದಿನ ಇಂದು.
- ಕನ್ನಡದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಲಕ್ಷಾಂತರ ಕನ್ನಡ ಹೋರಾಟಗಾರರು,ಸಾಹಿತಿಗಳು, ಕಲಾವಿದರ ಶ್ರಮ, ತ್ಯಾಗ,ಬಲಿದಾನಗಳನ್ನು ಸ್ಮರಿಸುವ ದಿನ ಕೂಡಾ ಹೌದು.
- ಇದು ನಾಡು-ನುಡಿಯ ಬಗ್ಗೆ ನಮಗಿರುವ ಬದ್ದತೆಯ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು.
- ನಮ್ಮ ಕನ್ನಡ ಪ್ರೇಮ, ಕನ್ನಡ ರಾಜ್ಯೋತ್ಸವ ಆಚರಣೆಯ ನವಂಬರ್ ತಿಂಗಳಿಗೆ ಸೀಮಿತವಾಗಬಾರದು. ಕನ್ನಡವನ್ನು ಕಟ್ಟುವ,ಬೆಳೆಸುವ ಉಳಿಸುವ ಕಾಯಕ ನಿತ್ಯ ನಿರಂತರವಾದುದು.
- ಕನ್ನಡ ಸೇವೆಯನ್ನು ಸರಕಾರವೋ, ಇನ್ನಾರೋ ಮಾಡಲಿ ಎಂಬ ಮನೋಭಾವ ಬೇಡ. ನಾನೇ ಕನ್ನಡದ ಕೆಲಸ ಮಾಡಬೇಕು, ಕನ್ನಡದ ಭಾಷೆ, ಸಂಸ್ಕøತಿ, ನೆಲ,ಜಲದ ಹಿತವನ್ನು ಕಾಯಬೇಕು ಎಂಬ ಸಂಕಲ್ಪವನ್ನು ಇಂದಿನ ದಿನ ನಾವೆಲ್ಲರೂ ಕೈಕೊಳ್ಳಬೇಕಾಗುತ್ತದೆ.
- ಕನ್ನಡದ ಭಾಷೆಗೆ ತನ್ನದೇ ಆಗಿರುವ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಆಶಯವನ್ನು ಹೊಂದಿದೆ.
- ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ ‘’ಮಾನವ ಕುಲ ತಾನೊಂದೇ ವಲಂ’’ ಎಂದು ಹೇಳಿದ್ದು.
- ನಮ್ಮದು ಬಹುತ್ವದ ವ್ಯವಸ್ಥೆ. ಇಲ್ಲಿ ಬಹುಭಾಷೆಗಳಿವೆ, ಬಹುಸಂಸ್ಕøತಿಗಳಿವೆ. ಈ ಎಲ್ಲಾ ಸಮುದಾಯಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುತ್ತಾ ಬದುಕನ್ನು ಕಟ್ಟಿಕೊಂಡಿವೆ.
- ಭಾಷೆಯ ಅಳಿವು ಎಂದರೆ ಸಂಸ್ಕøತಿ ಮತ್ತು ಸಮುದಾಯದ ಅಳಿವು ಕೂಡಾ ಆಗಿರುತ್ತದೆ. ಇಂಗ್ಲೀಷ್, ಹಿಂದಿ ಇರಲಿ, ಇಲ್ಲವೇ ಬೇರೆ ಯಾವುದೇ ಭಾಷೆ ಇರಲಿ. ನಮ್ಮ ಮೇಲೆ ಆಧಿಪತ್ಯವನ್ನು ಮೆರೆಯುವುದನ್ನು ಸಹಿಸಲಾಗದು.
- ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.
- ನಾನು ಮುಖ್ಯಮಂತ್ರಿಯಾಗಿದ್ದಾಗ ಕನ್ನಡಿಗರೆಲ್ಲರೂ ಧಾರೆಯೆರೆದ ಬೆಂಬಲದ ಬಲದಿಂದ ನೆಲ-ಜಲ-ಭಾಷೆಯ ರಕ್ಷಣೆ-ಪೋಷಣೆಯ ವಿಚಾರದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಯಿತು.
- ಕನ್ನಡ ಶಾಲೆಗಳ ರಕ್ಷಣೆ, ಹಿಂದಿ ಹೇರಿಕೆಗೆ ವಿರೋಧ, ನಾಡಧ್ವಜದ ಬಗೆಗಿನ ಒಕ್ಕೊರಲಿನ ಬೇಡಿಕೆ…. ಹೀಗೆ ಕನ್ನಡಿಗರೆಲ್ಲರ ದನಿಗೆ ನಾನು ದನಿಗೂಡಿಸಿದ ತೃಪ್ತಿ ನನಗಿದೆ.
- ಉದ್ಯೋಗ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕನ್ನಡಿಗ ಯುವಕ-ಯುವತಿಯರು ಎದುರಿಸುವ ಮುಖ್ಯ ಸಮಸ್ಯೆಯಾಗಿದೆ.
- ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ನ್ಯಾಯದ ಪಾಲು ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕನ್ನಡಿಗರಲ್ಲಿದೆ.
- ರಾಜ್ಯದಲ್ಲಿ ಸ್ಥಾಪಿತವಾಗುವ ಕೇಂದ್ರದ ಉದ್ಯಮಗಳಲ್ಲಿ ಕೂಡಾ ಇದೇ ಸ್ಥಿತಿ ಇದೆ. ಒಂದು ಹಂತದವರೆಗಿನ ನೇಮಕಾತಿಯಲ್ಲಿ ಸ್ಥಳೀಯರನ್ನೇ ಪರಿಗಣಿಸಬೇಕಾದ ಅಗತ್ಯ ಇದೆ.
- ನಮ್ಮ ಯುವಜನರ ಭವಿಷ್ಯ ರೂಪಿಸುವ ದೃಷ್ಟಿಯಿಂದ ಈ ಹೋರಾಟವನ್ನು ಪಕ್ಷಭೇಧ ಮರೆತು ಎಲ್ಲರೂ ಒಗ್ಗೂಡಿ ನಡೆಸಬೇಕಾದ ಅಗತ್ಯ ಇದೆ.
- ಇಂತಹದ್ದೊಂದು ಸಂಕಲ್ಪದ ಮೂಲಕವೇ ಈ ಬಾರಿಯ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗೋಣ.
- ಮತ್ತೊಮ್ಮೆ ನಾಡ ಬಾಂಧವರಿಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜೈ ಹಿಂದ್, ಜೈ ಕರ್ನಾಟಕ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?