Featured
JDS ಸದಸ್ಯರ ಮಲೇಷಿಯಾ ಟೂರ್ ಕ್ಯಾನ್ಸಲ್ ಆಗಿದ್ದು ಯಾಕೆ..? ಪಕ್ಷ ಬಿಡ್ತಾರಾ..? HDKಗೆ ಕಾದಿದೆಯಾ ಶಾಕ್..?

ರೈಸಿಂಗ್ ಕನ್ನಡ : ಪ್ರಾದೇಶಿಕ ಪಕ್ಷ ಜೆಡಿಎಸ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಬಹಿರಂಗ ಆಗ್ತಿದೆ. ಕಳೆದ ಕೆಲವು ದಿನಗಳಿಂದ ಜೆಡಿಎಸ್ ಶಾಸಕರು ಹಾಗೂ ಪರಿಷತ್ ಸದಸ್ಯರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ಹೊರ ಹಾಕಿದ್ರು. ಅವರ ಅಸಮಾಧಾನದ ಹೊಗೆ ಇನ್ನೂ ಕಡಿಮೆಯಾದಂತೆ ಕಾಣ್ತಿಲ್ಲ. ಇದೇ ಕಾರಣಕ್ಕಾಗಿಯೇ ಎಲ್ಲಾ ಅತೃಪ್ತ ಶಾಸಕರನ್ನ ಮಲೇಷಿಯಾಗೆ ಕರೆದ್ಕೊಂಡು ಹೋಗಿ, ಅಲ್ಲಿ ಸಂಧಾನ ನಡೆಸೋದಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗಳು ಪ್ಲಾನ್ ಮಾಡಿದ್ರು. ಆದ್ರೆ, ಅದೂ ಕೂಡ ಸದ್ಯಕ್ಕೆ ಸ್ಟಾಪ್ ಆಗಿದೆ..
ನವೆಂಬರ್ 3ರಂದು ಹೆಚ್.ಡಿ. ಕುಮಾರಸ್ವಾಮಿ ಜೊತೆ ಮಲೇಷಿಯಾಗೆ ಹೋಗಲು ಚಿಂತನೆ ನಡೆದಿತ್ತು. ಆದ್ರೆ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನಡೆಸಿದ ಪರಿಷತ್ ಸದಸ್ಯರ ಸಭೆಯಲ್ಲಿ ಮಲೇಷಿಯಾ ಟೂರ್ ಕ್ಯಾನ್ಸಲ್ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಯಾರೂ ಕೂಡ ಕುಮಾರಸ್ವಾಮಿ ಜೊತೆ ಮಲೇಷಿಯಾಗೆ ಹೋಗದಿರಲು ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಇದರಿಂದಾಗಿ ಕುಮಾರಸ್ವಾಮಿ ಪ್ಲಾನ್ ಉಲ್ಟಾ ಆಗಿದೆ.
ಇದೇ ವಿಚಾರವಾಗಿ ಮಾತ್ನಾಡಿರೋ ಪರಿಷತ್ ಸದಸ್ಯ ಟಿ. ಶರವಣ, ಮಲೇಷಿಯಾಗೆ ಕರೆದುಕೊಂಡು ಹೋಗವ ಪ್ರಸ್ತಾಪ ಬಂದಿತ್ತು. ಇದಕ್ಕಾಗಿ ಪಾಸ್ಪೋರ್ಟ್ ಕೇಳಿದ್ದರು. ಆದ್ರೆ, ರಾಜ್ಯದಲ್ಲಿ ನೆರೆ ಪರಿಸ್ಥಿತಿ ಇರುವ ಕಾರಣ, ಮಲೇಷಿಯಾ ಟೂರ್ ಕ್ಯಾನ್ಸಲ್ ಮಾಡಿರೋದಾಗಿ ಶರವಣ ಹೇಳಿದ್ದಾರೆ. ಆದ್ರೆ, ಶರವಣ ಹೇಳುವಂತೆ ಕೇವಲ ಇದು ನೆರೆ ಪರಿಸ್ಥಿತಿಯಿಂದ ಆದ ಕ್ಯಾನ್ಸಲ್ ಆಗಿರೋದು ಅಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಮ್ಮ ಮುನಿಸು ಕಡಿಮೆಯಾಗಿಲ್ಲ ಎಂಬುದನ್ನ ತೋರಿಸಲು ಜೆಡಿಎಸ್ ಪರಿಷತ್ ಸದಸ್ಯರು ಮಾಡ್ತಿರೋ ಹೊಸ ಪ್ಲಾನ್ ಅಷ್ಟೇ ಅನ್ನೋದು ರಾಜಕೀಯ ತಜ್ಞರ ವಾದ.
ಈ ನಡುವೆ, ಜೆಡಿಎಸ್ನ ಪರಿಷತ್ ಸದಸ್ಯರು ಪಕ್ಷ ಬಿಡಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ. ಎಲ್ಲರೂ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಶೀಘ್ರವೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?