Featured
ರಾಜ್ಯಕ್ಕೆ 30 ಜಿಲ್ಲೆ, ಆದ್ರೆ ಬಿಜೆಪಿಗೆ 36 ಜಿಲ್ಲೆಗಳಿವೆ : ನಳೀನ್ ಕುಮಾರ್ ಕಟೀಲ್

ರಾಯಚೂರು : ಗುರುವಾರ ಇಡೀ ದಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿವಾದಕ್ಕೀಡಾಗಿದ್ರು. ಯಾದಗಿರಿಯಲ್ಲಿ ಮಾತ್ನಾಡುತ್ತಾ 32ನೇ ಜಿಲ್ಲೆ ಎಂದು ಹೇಳಿದ್ದೇ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಇರೋದು 30 ಜಿಲ್ಲೆ, 32 ಜಿಲ್ಲೆ ಎಲ್ಲಿಂದ ಬತ್ತು ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡ್ತು. ಮಾಧ್ಯಮಗಳು ಕೂಡ ಸ್ವತಃ ನಳೀನ್ ಕುಮಾರ್ ಯಡವಟ್ಟು ಮಾಡಿದ್ದಾರೆ ಎಂದು ಜೋರು ಸುದ್ದಿ ಮಾಡಿದ್ವು.
ಇದಕ್ಕೆಲ್ಲಾ ಕೊನೆಗೆ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದಾರೆ. ರಾಯಚೂರಿನಲ್ಲಿ ಮಾತ್ನಾಡಿದ ನಳೀನ್ ಕುಮಾರ್ ಕಟೀಲ್, ಬಿಜೆಪಿ ಸಂಘಟನಾ ಹಾಗೂ ಅಭಿವೃದ್ಧಿಗಾಗಿ ರಾಜ್ಯವನ್ನ 36 ಜಿಲ್ಲೆಗಳನ್ನಾಗಿ ಮಾಡಿಕೊಂಡಿದೆ ಎಂದ್ರು. ಸರ್ಕಾರದಲ್ಲಿ ೩೦ ಜಿಲ್ಲೆಗಳಿವೆ, ಆದರೆ ಬಿಜೆಪಿಯಲ್ಲಿ ೩೬ ಜಿಲ್ಲೆಗಳಿವೆ ಎಂದು ಹೇಳಿ, ತಮ್ಮ ಹೇಳಿಕೆಗೆ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ರು.
ಇದೇ ವೇಳೆ ಮಾತ್ನಾಡಿದ ಅವ್ರು, ರಾಯಚೂರಿನಲ್ಲಿ ಸಂಘಟನಾ ಪರ್ವ ನಡೆಯುತ್ತಿದೆ. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಮಹಾತ್ಮಗಾಂಧಿ ರಾಮರಾಜ್ಯ ಆಗಬೇಕು ಅಂತ ಬಯಸಿದ್ದರು. ಸ್ವಾತಂತ್ರ್ಯದ ಬಳಿಕ ಗಾಂಧಿ ಹೆಸರಿನಲ್ಲಿ ರಾಜಕೀಯ ಆರಂಭವಾಯಿತು. ರಾಮನಂತ ಆದರ್ಶ ವ್ಯಕ್ತಿಗಳನ್ನ ನಿರ್ಮಿಸಿದರೆ ದೇಶ ಅಭಿವೃದ್ಧಿ ಆಗುತ್ತೆ ಎಂದು ಕಟೀಲ್ ಹೇಳಿದ್ರು.
ಪ್ರಧಾನಿ ನರೇಂದ್ರ ಮೋದಿ ಗಾಂಧಿ ಕನಸುಗಳನ್ನ ನನಸು ಮಾಡಲು ಪ್ರಯತ್ನ ಮಾಡಿದ್ದಾರೆ. ಕಾಶ್ಮೀರ ನಮ್ಮದು, ಈ ದೇಶದಲ್ಲಿ ಎರಡು ಧ್ವಜಗಳಿರಬಾರದು. ಕಾಶ್ಮೀರಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮೋದಿ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















