Featured
ರೈತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಕ್ : ಅಯ್ಯೋ ಯಾರಿಗೇಳೋಣ ನಮ್ ಪ್ರಾಬ್ಲಂ..?

ರೈಸಿಂಗ್ ಕನ್ನಡ : ಯೆಸ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೃಷಿಕರಿಗೆ ಶಾಕ್ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಅನ್ನದಾತರು ಕಣ್ಣೀರು ಹಾಕುವಂತಾಗಿದೆ. ಅದಕ್ಕೆ ಕಾರಣ, ಬಿಎಸ್ವೈ ನಿರ್ಧಾರ. ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮಾಡಿದ್ದ ರೈತರ ಸಾಲಮನ್ನಾ ಬಗ್ಗೆ ಇನ್ನು ಗೊಂದಲವಿದೆ. ಹೀಗಾಗಿ, ಕೆಲ ಷರತ್ತುಗಳನ್ನು ವಿಧಿಸಿರೋದ್ರಿಂದ ತುಂಬಾ ರೈತರಿಗೆ ಇನ್ನೂಕೂಡ ಸಾಲಮನ್ನಾ ಆಗಿಲ್ಲ.
ಈ ನಡುವೆ, ಯಡಿಯೂರಪ್ಪರ ಸಿಎಂ ಆದ್ಮೇಲೆ, ನಮ್ಮ ಸಾಲ ಮನ್ನ ಮಾಡಲಿದ್ದಾರೆ ಅಂತಾ ನಿರೀಕ್ಷೆ ಇಟ್ಕೊಂಡಿದ್ರು. ಆದ್ರೆ, ಎಲ್ಲಾ ನಿರೀಕ್ಷೆ ಹುಸಿಯಾಗಿದೆ. ಯಾವುದೇ ಕಾರಣಕ್ಕೂ ಹೊಸದಾಗಿ ಸಾಲಮನ್ನಾ ಮಾಡೋದಿಲ್ಲ. ಜೊತೆಗೆ ಸಾಲಮನ್ನಾಗೆ ಮೀಸಲಿಟ್ಟಿದ್ದ ಹಣವನ್ನ ನೆರೆ ಪೀಡಿತರಿಗೆ ಬಳಸೋದಾಗಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಸಾಲಮನ್ನದ ನಿರೀಕ್ಷೆಯಲ್ಲಿದ್ದ ರೈತರಿಗೆ ಕಣ್ಣೀರೇ ಉಳಿಯಲಿದೆ.
ಈ ಮಧ್ಯೆ, ಬೆಳಗಾವಿಯಲ್ಲಿ ಮಾತ್ನಾಡಿದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಮೈತ್ರಿ ಸರ್ಕಾರ ಮಾಡಿದ ಸಾಲಮನ್ನಾವನ್ನೇ ಮುಂದುವರೆಸುತ್ತೇವೆ. ಜೊತೆಗೆ ಚುನಾವಣೆ ಮುಗಿಯುತ್ತಿದ್ದಂತೆ ಮಹಾದಾಯಿ ಸೇರಿದಂತೆ ಎಲ್ಲಾ ನೀರಾವರಿ ಸಮಸ್ಯೆ ಇತ್ಯರ್ಥಗೊಳಿಸ್ತೀವಿ ಅಂತಾ ಅಭಯ ನೀಡಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















