Featured
ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದ ಮಹಿಳೆ ರಕ್ಷಿಸಿ, ಮಾನವೀಯತೆ ಮೆರೆದ ಆರೋಗ್ಯ ಸಚಿವ ಶ್ರೀರಾಮುಲು
ರೈಸಿಂಗ್ ಕನ್ನಡ : ಅನಾರೋಗ್ಯದಿಂದ ರಸ್ತೆಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದ ಮಹಿಳೆಯನ್ನ ಆರೋಗ್ಯ ಸಚಿವ ಬಿ. ಶ್ರೀರಾಮುಲು ರಕ್ಷಣೆ ಮಾಡಿದ್ದಾರೆ. ಈ ಮೂಲಕ ಆರೋಗ್ಯ ಸಚಿವರು ಮಾನವೀಯತೆ ಮೆರೆದಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಚಾಮರಾಜನಗರ ಪ್ರವಾಸದಲ್ಲಿದ್ದ ವೇಳೆ, ಶ್ರೀರಾಮುಲು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗ್ತಿದ್ರು. ಈ ಮಧ್ಯೆ, ಕಾಡಿನ ದಾರಿ ಮಧ್ಯೆದಲ್ಲಿ ಮಹಿಳೆ ಬಿದ್ದು ಹೋರಾಟ ಮಾಡ್ತಿದ್ರು. ಆಗ ಅದೇ ಮಾರ್ಗದಲ್ಲಿ ಬರ್ತಿದ್ದ ರಾಮುಲು, ಮಹಿಳೆ ಬಿದ್ದಿರುವುದನ್ನ ನೋಡಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ರು.
ತಕ್ಷಣ ಮಹಿಳೆಗೆ ಸಹಾಯ ಮಾಡಿ, ತಮ್ಮ ಕಾರಿನಲ್ಲೇ ಮಹಿಳೆಯನ್ನ ಕರೆದುಕೊಂಡು ಹೋಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ. ಕಾಡಿನಲ್ಲಿ ರಸ್ತೆ ಇರೋದ್ರಿಂದ, ವಾಹನಗಳ ಸಂಚಾರ ತುಂಬಾ ವಿರಳ. ಹೀಗಾಗಿ, ತುಂಬಾ ಸಮಯದಿಂದ ಮಹಿಳೆ ಒದ್ದಾಡ್ತಿದ್ರು ಎನ್ನಲಾಗಿದೆ.
ಸಚಿವ ಶ್ರೀರಾಮುಲು ಸೂಕ್ತ ಸಮಯಕ್ಕೆ ನೆರವು ನೀಡಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವ ಈ ಮಾನವೀಯತೆ ಇತರರಿಗೆ ಮಾದರಿಯಾಗಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?