Featured
ಬಿಗ್ ಬಿ ಅಮಿತಾಬ್ ಬಚ್ಚನ್ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ : ಲೆಜೆಂಡ್ಗೆ ಜೀವಮಾನ ಶ್ರೇಷ್ಠ ಗೌರವ
![](https://risingkannada.com/wp-content/uploads/2019/09/amithab.jpg)
ರೈಸಿಂಗ್ ಕನ್ನಡ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ಭಾರತೀಯ ಸಿನಿಮಾದ ಅತ್ಯುನ್ನತ ಗೌರವ ಸಿಕ್ಕಿದೆ. ಚಿತ್ರರಂಗದ ಜೀವಮಾನ ಶ್ರೇಷ್ಠ ಸಾಧನೆಗಾಗಿ ಅಮಿತಾಬ್ ಬಚ್ಚನ್ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಿಕ್ಕಿದೆ. ಕೇಂದ್ರ ಸರ್ಕಾರ ನೇಮಿಸಿರೋ ಸಮಿತಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಅಮಿತಾಬ್ ಬಚ್ಚನ್ ಅವರನ್ನ ಆಯ್ಕೆ ಮಾಡಿದೆ. ಈ ಸುದ್ದಿಯನ್ನ ಹಂಚಿಕೊಳ್ಳಲು ಖುಷಿ ಪಡೋದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ, ಸಂಭ್ರಮ ಹಂಚಿಕೊಂಡಿದ್ದಾರೆ. The legend Amitabh Bachchan who entertained and inspired for 2 generations has been selected unanimously for #DadaSahabPhalke award. The entire country and international community is happy. My heartiest Congratulations to him.@narendramodi @SrBachchan pic.twitter.com/obzObHsbLk— Prakash Javadekar (@PrakashJavdekar) September 24, 2019
76 ವರ್ಷಗಳ ಅಮಿತಾಬ್ ಬಚ್ಚನ್ ಅವರಿಗೆ ಅಪರೂಪದ ಗೌರವ ಸಿಕ್ಕಿದೆ. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ, ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ನಗದು ಬಹುಮಾನವನ್ನ ಒಳಗೊಂಡಿದೆ. ಅಮಿತಾಬ್ಗೆ ದಾದಾ ಪಾಲ್ಕೆ ಪ್ರಶಸ್ತಿ ಸಿಕ್ಕಿರೋದಕ್ಕೆ ಸೂಪರ್ಸ್ಟಾರ್ ರಜನಿಕಾಂತ್ ಸೇರಿದಂತೆ ಖ್ಯಾತ ನಟ, ನಟಿಯರು ಶುಭಾಷಯ ಕೋರಿದ್ದಾರೆ.
Congratulations dear @SrBachchan ji !!! You richly deserve this commendable honour !!!! #DadaSahebPhalkeAward— Rajinikanth (@rajinikanth) September 24, 2019
ಭಾರತೀಯ ಸಿನಿಮಾದ ಲೆಜೆಂಡ್ ಅಂದ್ರೆ, ಅದು ಅಮಿತಾಬ್ ಬಚ್ಚನ್. ಮೂರು ಜನರೇಷನ್ ಅಭಿಮಾನಿಗಳನ್ನ ರಂಜಿಸಿರೋ ಸೂಪರ್ಸ್ಟಾರ್. ಈಗಾಗಲೇ ಹಲವು ಪ್ರಶಸ್ತಿಗಳನ್ನ ಅಮಿತಾಬ್ ಪಡೆದಿದ್ದಾರೆ. ಅಮಿತಾಬ್ ಮಾಡದ ಪಾತ್ರವೇ ಇಲ್ಲ. ಎಲ್ಲಾ ರೀತಿಯ ಪಾತ್ರಗಳನ್ನ ಮಾಡಿ, ಬಾಲಿವುಡ್ ಲೆಜೆಂಡ್, ಬಿಗ್ ಬಿ, ಮೆಗಾ ಸ್ಟಾರ್, ಸೂಪರ್ ಸ್ಟಾರ್ ಹೀಗೆ ಕೋಟ್ಯಂತರ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯ ಗೌರವ ಪಡೆಯುತ್ತಿರೋ ಬಿಗ್ ಬಿಗೆ ರೈಸಿಂಗ್ ಕನ್ನಡ ಶುಭ ಹಾರೈಸುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?