Featured
ರಾಕೇಶ್ ಸಿದ್ದರಾಮಯ್ಯ ಸಾವಿಗೆ ನಾನೇಕೆ ಕಾರಣವಾಗಲಿ : MTB ಹತಾಶೆ ಹೇಳಿಕೆ : ಭೈರತಿ ಸುರೇಶ್
ಬೆಂಗಳೂರು : ರಾಕೇಶ್ ಸಿದ್ದರಾಮಯ್ಯ ಸಾವಿಗೆ ಭೈರತಿ ಸುರೇಶ್ ಕಾರಣ ಅನ್ನೋ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆರೋಪ, ಭೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರಾಕೇಶ್ ನನ್ನ ತಮ್ಮ. ಅವನ ಸಾವಿಗೆ ನಾನೇಕೆ ಕಾರಣವಾಗಲಿ. ಹತಾಶೆ ಮನೋಭಾವದಿಂದ ಎಂಟಿಬಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಕೆ.ಆರ್.ಪುರಂನಲ್ಲಿ ಮಾತ್ನಾಡಿದ ಭೈರತಿ ಸುರೇಶ್, ಒಂದು ಸಾವನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರೋದು ಅವರ ಹತಾಶೆ ಎದ್ದುಕಾಣುತ್ತಿದೆ. ರಾಕೇಶ್ ಸಾವಿಗೆ ಸಿದ್ದರಾಮಯ್ಯ ಅವರು ಮಾತನಾಡಬೇಕು. ಎಂಟಿಬಿ ಮೂರನೇ ವ್ಯಕ್ತಿ. ಆತನಿಗೆ ಮಾತನಾಡುವ ಯಾವ ಹಕ್ಕಿದೆ ಎಂದು ಪ್ರಶ್ನೆ ಮಾಡಿದ್ರು. ಇದೇ ವೇಳೆ, ನಾನು ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದಾಗ, ಎಂಟಿಬಿ ಎಲ್ಲಿದ್ದರು ಎನ್ನುವುದನ್ನು ತಿಳಿದುಕೊಳ್ಳಲಿ. ಗ್ರಾಮ ಪಂಚಾಯ್ತಿಯಿಂದ ಶಾಸಕನಾಗಿದ್ದೇನೆ. ನಾನು ಬಚ್ಚಾ ಅಲ್ಲ ಎಂದು ತಿರುಗೇಟು ನೀಡಿದ್ರು.
ಬೇರೆ ಮನೆಯಿಂದ ಬಂದು ಕಾಂಗ್ರೆಸ್ನಲ್ಲಿ ವಾಸ ಅಂತೀರಲ್ಲ. ನೀವೀಗ ಮಾಡ್ತಿರೋದು ಏನು.? ಹೊಸಕೋಟೆಯಲ್ಲಿ ಬಚ್ಚೇಗೌಡ ಕಟ್ಟಿ ಬೆಳೆಸಿರೋ ಮನೆಯಲ್ಲಿ ನೀವು ವಾಸ ಮಾಡಲು ಹೋಗ್ತಿರೋದು ಸರಿಯೇ..? ನಿಮ್ಮ ಬಂಡವಾಳ, ನೀವು ನಡೆಸಿರೋ ಹಗರಣಗಳ ಬಗ್ಗೆ ನಮಗೂ ಹೊತ್ತು ಎಂದು ತಿರುಗೇಟು ನೀಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?