Featured
ಆಸ್ಕರ್ ಪ್ರಶಸ್ತಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೇಡ್ ಸಿನಿಮಾ..!
ರೈಸಿಂಗ್ ಕನ್ನಡ : ವ್ರತ ಕೆಟ್ಟರೂ, ಫಲಿತಾಂಶ ಸಿಗುತ್ತೆ ಅನ್ನೋ ರೀತಿ, ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ವಿಷಯದಲ್ಲೂ ಇದೇ ರೀತಿಯಾಗಿದೆ. ಇತ್ತೀಚೆಗಷ್ಟೇ ಕನ್ನಡ, ತೆಲುಗು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾದ ಸಿನಿಮಾ ಡಿಯರ್ ಕಾಮ್ರೇಡ್. ಆದ್ರೆ, ನಿರೀಕ್ಷೆಯಷ್ಟು ಸಕ್ಸಸ್ ಕಾಣದೆ, ಸಿನಿಮಾ ಫ್ಲಾಫ್ ಆಯ್ತು. ಇದರಿಂದ ರಶ್ಮಿಕಾ ಹಾಗೂ ಹೀರೋ ವಿಜಯ್ ದೇವರಕೊಂಡ ಇಬ್ಬರೂ ಸೇರಿದಂತೆ ಇಡೀ ಸಿನಿಮಾ ತಂಡ ಬೇಸರದಲ್ಲಿತ್ತು.
ಇದೀಗ, ಸಿನಿಮಾ ಫ್ಲಾಫ್ ಆದ್ರೂ, ಡಿಯರ್ ಕಾಮ್ರೇಡ್ ಸಿನಿಮಾ ಆಸ್ಕರ್ ಪ್ರಶಸ್ತಿ ರೇಸ್ಗೆ ಹೋಗಿದೆ. ಯೆಸ್, ಇದು ಶಾಕಿಂಗ್ ಆದ್ರೂ ನಿಜ. ಫೆಡರೇಷನ್ ಆಫ್ ಇಂಡಿಯಾ ಕಮಿಟಿ, ಡಿಯರ್ ಕಾಮ್ರೇಡ್ ತೆಲುಗು ಸಿನಿಮಾವನ್ನ ಆಸ್ಕರ್ ಎಂಟ್ರಿಗಾಗಿ ಲಿಸ್ಟ್ ಮಾಡಿದೆ. ಇದರಿಂದಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸೇರಿದಂತೆ ಇಡೀ ಸಿನಿಮಾ ತಂಡ ಸಂಭ್ರಮ ಮಾಡ್ತಿದೆ. ಭಾರತದ ವಿವಿಧ ಭಾಷೆಗಳ ಒಟ್ಟು 28 ಸಿನಿಮಾಗಳು ಆಸ್ಕರ್ ಪ್ರಶಸ್ತಿ ಲಿಸ್ಟ್ನಲ್ಲಿವೆ. ತೆಲುಗಿನಿಂದ ಡಿಯರ್ ಕಾಮ್ರೇಡ್ ಮಾತ್ರ ಸೆಲೆಕ್ಟ್ ಆಗಿದೆ.
ಡಿಯರ್ ಕಾಮ್ರೇಡ್ ಸೇರಿದಂತೆ ಒಟ್ಟು 28 ಸಿನಿಮಾಗಳ ಸ್ಕ್ರೀನಿಂಗ್ ನಡೀತಿದೆ. ಸ್ಕ್ರೀನಿಂಗ್ ಕಮಿಟಿ ಎಲ್ಲಾ ಸಿನಿಮಾಗಳನ್ನ ನೋಡಿದ ಮೇಲೆ ಒಂದು ಸಿನಿಮಾವನ್ನ ಭಾರತದಿಂದ ವಿದೇಶಿ ಸಿನಿಮಾ ಲಿಸ್ಟ್ನಲ್ಲಿ ಆಸ್ಕರ್ ಪ್ರಶಸ್ತಿಗೆ ಕಳುಹಿಸಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?