Featured
ವೃಷಭಾವತಿ ನದಿ ಉಳಿಸಿ : ಮ್ಯಾರಥಾನ್ನಲ್ಲಿ ನಟ ಗಣೇಶ್, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಭಾಗಿ
![](https://risingkannada.com/wp-content/uploads/2019/09/WhatsApp-Image-2019-09-22-at-9.52.20-AM2.jpeg)
ಬೆಂಗಳೂರು : ಬೆಂಗಳೂರಿನ ಜೀವನದಿಯಾಗಿದ್ದ ವೃಷಭಾವತಿ ಇಂದು ಚರಂಡಿ ಮೋರಿ, ರಾಜಕಾಲುವೆಯಾಗಿದೆ. ಇದೀಗ ವೃಷಭಾವತಿ ನದಿ ಉಳಿಸುವ ಹೋರಾಟ ಮತ್ತೆ ಜೋರಾಗಿದ್ದು, ಇವತ್ತು ರನ್ ಫಾರ್ ವೃಷಭಾವತಿ ಮ್ಯಾರಥಾನ್ ನಡೀತು. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ರನ್ ಫಾರ್ ವೃಷಭಾವತಿ ಮ್ಯಾರಥಾನ್ ನಡೀತು.
ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿ ವರೆಗೆ ನಡೆದ ಮ್ಯಾರಥಾನ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಚಕ್ರವರ್ತಿ ಸೂಲಿಬೆಲೆ ಸೇರಿ ಸಾವಿರಾರು ಮಂದಿ ಯುವಕರು ಭಾಗಿಯಾಗಿದ್ರು. ಜಿಟಿ ಜಿಟಿ ಮಳೆ ನಡುವೆಯೂ ಮ್ಯಾರಥಾನ್ ಯಶಸ್ವಿಯಾಗಿ ನಡೀತು. ಯುವ ಸಂಸದರ ತೇಜಸ್ವಿ ಸೂರ್ಯ, ತೇಜಸ್ವಿನಿ ಅನಂತ್ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
![](https://risingkannada.com/wp-content/uploads/2019/09/WhatsApp-Image-2019-09-22-at-9.52.21-AM-1024x1024.jpeg)
ರನ್ ಫಾರ್ ವೃಷಭಾವತಿ ವಿಚಾರವಾಗಿ ಮಾತ್ನಾಡಿರ ಚಕ್ರವರ್ತಿ ಸೂಲಿಬೆಲೆ, ಇದು ಕೇವಲ ಒಂದು ದಿನದ ಓಟ ಅಲ್ಲ. ಬೆಂಗಳೂರಿನ ಜೀವನದಿಯಾಗಿದ್ದ ವೃಷಭಾವತಿಗೆ ಪುನರ್ ಚೈತನ್ಯ ನೀಡುವ ಉದ್ದೇಶ ನಮ್ಮದು ಎಂದ್ರು. ಈಗಾಗಲೇ ತಜ್ಞರು, ಬಿಬಿಎಂಪಿ ಎಂಜಿನಿಯರ್ಗಳ ಜೊತೆ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ವೃಷಭಾವತಿ ಪುನರ್ ಚೈತನ್ಯಕ್ಕೆ ಶ್ರಮವಹಿಸೋದಾಗಿ ಸೂಲಿಬೆಲೆ ಚಕ್ರವರ್ತಿ ಹೇಳಿದ್ರು.
ಅದೇನೇ ಆಗ್ಲಿ, ಜೀವನದಿ ವೃಷಭಾವತಿ ಇವತ್ತು ರಾಜಾಕಾಲುವೆ, ಚರಂಡಿಯಾಗಿರೋದು ನಮ್ಮೆಲ್ಲರ ದುರಂತ. ನಾವು ಕೂಡ ವೃಷಭಾವತಿ ಪುನರ್ ಚೈತನ್ಯಕ್ಕೆ ಶ್ರಮಿಸೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?