Featured
ಮಂಡ್ಯದಲ್ಲಿ ಸುಮಲತಾ ಗೆದ್ದಂತೆ ಹೊಸಕೋಟೆಯಲ್ಲೂ ಸ್ವಾಭಿಮಾನಿ ಕಾಂಗ್ರೆಸಿಗರು ಗೆಲ್ಲಬೇಕು : ಪರೋಕ್ಷವಾಗಿ HDKಗೆ ಸಿದ್ದು ಟಾಂಗ್..!
![](https://risingkannada.com/wp-content/uploads/2019/09/IMG-20190921-WA0000.jpg)
ಹೊಸಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಹೊಸಕೋಟೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ರಣಭೇರಿ ಬಾರಿಸಿರೋ ಸಿದ್ದು, ಇಲ್ಲೂ ಕೂಡ ಹೆಚ್.ಡಿ. ಕುಮಾರಸ್ವಾಮಿಯನ್ನ ಪರೋಕ್ಷವಾಗಿ ಕುಟುಕಿದ್ದಾರೆ. ಎಂಟಿಬಿ ವಿರುದ್ಧ ಸ್ವಾಭಿಮಾನಿ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಸ್ತು. ಈ ವೇಳೆ ಮಾತ್ನಾಡಿದ ಸಿದ್ದು, ಮಂಡ್ಯದಲ್ಲಿ ಏನಾಯ್ತು ಅಂತ ಗೊತ್ತಿದೆಯಲ್ಲ. ಸ್ವಾಭಿಮಾನಿಗಳೇ ಮತ ಕೊಡಿ ಎಂದು ಸುಮಲತಾ ಕೇಳಿದ್ರು.. ಸ್ವಾಭಿಮಾನಿ ಮಂಡ್ಯದ ಜನ ವೋಟ್ ಕೊಟ್ಟು ಗೆಲ್ಲಿಸಿದ್ರು ಎಂದು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಿದ್ದರಾಮಯ್ಯ, ಮಂಡ್ಯದ ಜನ ದುಡ್ಡಿಗೆ ಮತ ಮಾರಿಕೊಂಡ್ರಾ..? ಇಲ್ಲ.. ಸ್ವಾಭಿಮಾನಿ ಹೆಸರಲ್ಲಿ ಸುಮಲತಾಗೆ ವೋಟ್ ಹಾಕಿ ಗೆಲ್ಲಿಸಿದ್ರು ಎಂದು ಸಿದ್ದರಾಮಯ್ಯ ಹೇಳಿದ್ರು. ಈ ಮೂಲಕ, ಮಾಜಿ ಸಿಎಂ ಕುಮಾರಸ್ವಾಮಿ ದುಡ್ಡು ಹಂಚಿದ್ರು, ಹಣ ಖರ್ಚು ಮಾಡಿದ್ರು ಅಂತ ಪರೋಕ್ಷವಾಗಿ ಹೇಳಿದ್ರು.
ಎಂಟಿಬಿ ನಾಗರಾಜ್ ನಮ್ಮ ಸರ್ಕಾರದಲ್ಲಿ ಮಂತ್ರಿಯಾದ್ರು. ಇನ್ನೇನು ಮಾಡ್ಬೇಕಿತ್ತು..? ಬಿಜೆಪಿಗೆ ಯಾಕೆ ಹೋಗ್ತಾರೆ ಅನ್ನೋದು ನಮಗೆ ಇನ್ನೂ ತಿಳಿದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ನಿಂದ ಎಲ್ಲಾ ಅನುಭವಿಸಿ, ದ್ರೋಹ ಮಾಡಿದವರಿಗೆ ಹೊಸಕೋಟೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದು ಕರೆ ಕೊಟ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?