ಜ್ಯೋತಿಷ್ಯ
ಮೂರ್ನಾಲ್ಕು ತಿಂಗಳಲ್ಲಿ ಸರ್ಕಾರ ಪತನವಾದ್ರೆ ಹೆಬ್ಬೆರಳು ಕಟ್ : ಕೋಡಿ ಶ್ರೀಗೆ ಮಂಡ್ಯ ಬಿಜೆಪಿ ಕಾರ್ಯಕರ್ತ ಸವಾಲ್
ಮಂಡ್ಯ : ರಾಜ್ಯ ಬಿಜೆಪಿ ಸರ್ಕಾರ ಮೂರು ನಾಲ್ಕು ತಿಂಗಳಲ್ಲಿ ಪತನವಾಗಿ ಮಧ್ಯಂತರ ಚುನಾವಣೆ ಬರುತ್ತೆ. ಹೀಗಂತೆ ಹೇಳಿದ್ದ ಕೋಡಿ ಮಠದ ಶ್ರೀಗಳಿಗೆ ಮಂಡ್ಯದ ಬಿಜೆಪಿ ಕಾರ್ಯಕ್ರರ್ತ ಸವಾಲ್ ಹಾಕಿದ್ದಾರೆ. ಒಂದ್ವೇಳೆ, ಮೂರು ನಾಲ್ಕು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾದ್ರೆ, ತನ್ನ ಹೆಬ್ಬೆರಳು ಕಟ್ ಮಾಡಿಕೊಳ್ಳೋದಾಗಿ ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಎಂಬಾತ ಸವಾಲು ಹಾಕಿದ್ದಾನೆ.
ಬಿಜೆಪಿ ಸರ್ಕಾರ ಪತನವಾದ್ರೆ, ತನ್ನ ಬಲಗೈ ಹೆಬ್ಬೆರಳು ಕಟ್ ಮಾಡಿ ಕೋಡಿ ಮಠದ ಶ್ರೀಗಳ ಪಾದಕ್ಕೆ ಅರ್ಪಿಸುತ್ತೇನೆ. ಏಕಲವ್ಯ ತನ್ನ ಗುರುಗಳಿಗೆ ಹೆಬ್ಬೆರಳು ಕೊಟ್ಟಂತೆ ನಾನು ಕೊಡುತ್ತೇನೆ. ಒಂದ್ವೇಳೆ ಸರ್ಕಾರ ಪತನ ಆಗದೇ ಇದ್ರೆ, ಗುರುಗಳು ಏನೂ ಮಾಡೋದು ಬೇಡ. ನನ್ನನ್ನ ಮಠದ ಪಟ್ಟದ ಶಿಷ್ಯನನ್ನಾಗಿ ಮಾಡಿದ್ರೆ ಸಾಕು ಎಂದು ಸವಾಲ್ ಹಾಕಿದ್ದಾರೆ ಶಿವಕುಮಾರ್ ಆರಾಧ್ಯ.
ನಿನ್ನೆಯಷ್ಟೇ ಮಾತ್ನಾಡಿದ್ದ ಕೋಡಿ ಶ್ರೀಗಳು, ನೋಡ್ತಾ ಇರಿ. ಇನ್ನೂ ಮೂರು ನಾಲ್ಕು ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪತನವಾಗುತ್ತೆ. ಶೀಘ್ರವೇ ಮಧ್ಯಂತರ ಚುನಾವಣೆ ಬರುತ್ತೆ ಎಂದು ಭವಿಷ್ಯ ನುಡಿದಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?