Featured
ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ, ನೋಡ್ತಾ ಇರಿ : ಡಿಕೆ ಶಿವಕುಮಾರ್ ಚಾಲೆಂಜ್..!
ನವದೆಹಲಿ : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಆದ್ರೆ, ತಿಹಾರ್ ಜೈಲಿನಲ್ಲಿದ್ದರೂ ಡಿಕೆಶಿ ಎದೆಗುಂದಿಲ್ಲ. ನಾನು ತಪ್ಪು ಮಾಡಿಲ್ಲ. ಕೆಲವು ಮಿಸ್ಟೇಕ್ಗಳಿಂದ ಇವರು ಇಷ್ಟೊಂದು ಆಟ ಆಡಿಸ್ತಿದ್ದಾರೆ. ಇವರ ಆಟ ಹೆಚ್ಚು ದಿನ ನಡೆಯಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಜೊತೆ ಮಾತ್ನಾಡಿರೋ ಡಿಕೆಶಿ, ನವೆಂಬರ್ ಬಳಿಕ ನನಗೆ ರಾಜಯೋಗ ಇದೆ ಎಂದಿದ್ದಾರಂತೆ.
ನಾನು ಸಿಎಂ ಆಗಿಯೇ ರಾಜಕೀಯ ನಿರ್ಗಮನ
ನನ್ನ ರಾಜಕೀಯ ಅಷ್ಟು ಬೇಗ ಮುಗಿಯಲ್ಲ. ನಾನು ಕರ್ನಾಟಕದ ಸಿಎಂ ಆಗೇ ಆಗ್ತೀನಿ. ಮುಖ್ಯಮಂತ್ರಿ ಆದ ಬಳಿಕವಷ್ಟೇ ನಾನು ರಾಜಕೀಯದಿಂದ ನಿರ್ಗಮಿಸ್ತೇನೆ ಎಂದು ಡಿಕೆಶಿ ಹೇಳಿದ್ದಾರೆಂದು ಪರಮೇಶ್ವರ್ ಹೇಳಿದ್ದಾರೆ. ಆ ಮೂಲಕ ರಾಜಕೀಯ ವಿರೋಧಿಗಳಿಗೆ ಡಿಕೆ ಶಿವಕುಮಾರ್ ಚಾಲೆಂಜ್ ಜೊತೆ ಎಚ್ಚರಿಕೆ ನೀಡಿದ್ದಾರೆ.
ಸದ್ಯ 14 ದಿನಗಳ ನ್ಯಾಯಾಂಗ ಬಂಧನ ಎದುರಿಸ್ತಿರೋ ಡಿಕೆಶಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ಮತ್ತಷ್ಟು ಮುಳುವಾಗೋ ಸಾಧ್ಯತೆ ಇದೆ. ಮಗಳು ಐಶ್ವರ್ಯ ಹೆಸರಿನಲ್ಲಿ ಹೂಡಿಕೆ ಮಾಡಿರೋದು ಕೂಡ ಡಿಕೆಶಿಗೆ ಸಂಕಷ್ಟ ತಂದೊಡುವ ಸಾಧ್ಯತೆ ಹೆಚ್ಚಿದೆ.
ಇಷ್ಟೆಲ್ಲದರ ಮಧ್ಯೆ, ಧೈರ್ಯದಿಂದ ಇರುವ ಕನಕಪುರ ಬಂಡೆ, ನಾನು ಶೀಘ್ರವೇ ಹೊರಗೆ ಬರ್ತೀನಿ.. ಮುಖ್ಯಮಂತ್ರಿ ಆಗ್ತೀನಿ ಎಂದು ಖಡಕ್ ಆಗಿಯೇ ಆಶಾಭಾವನೆ ವ್ಯಕ್ತಪಡಿಸಿದ್ದಾರಂತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?