Featured
ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ಗೆ ಕಿಚ್ಚ ಸುದೀಪ್ ವಾಯ್ಸ್ : ಮಲಯಾಳಂಗೆ ಮಾತ್ರ ಇಲ್ಲ ಯಾಕೆ

ನಾಲ್ಕು ಭಾಷೆಗಳಲ್ಲಿ ಪೈಲ್ವಾನ್ಗೆ ಕಿಚ್ಚ ಸುದೀಪ್ ವಾಯ್ಸ್ : ಮಲಯಾಳಂಗೆ ಮಾತ್ರ ಇಲ್ಲ ಯಾಕೆ..?
ಬೆಂಗಳೂರು :
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿರೋದು ಗೊತ್ತೇ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಪೈಲ್ವಾನ್ ರಿಲೀಸ್ಗೆ ರೆಡಿಯಾಗಿದೆ. ಈ ಮಧ್ಯೆ, ಬಹುಭಾಷ ನಟರಾಗಿರೋ ಕಿಚ್ಚ ಸುದೀಪ್, ತಾವೇ ಸ್ವತಃ ನಾಲ್ಕು ಭಾಷೆಗಳಿಗೆ ವಾಯ್ಸ್ ಡಬ್ ಮಾಡಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಗೆ ಸ್ವತಃ ಸುದೀಪ್ ವಾಯ್ಸ್ ಡಬ್ ಮಾಡಿದ್ದಾರೆ. ಆದ್ರೆ, ಮಲಯಾಳಂನಲ್ಲಿ ಮಾತ್ರ ಸುದೀಪ್ ಧ್ವನಿ ಕೇಳಿಸೋದಿಲ್ಲ. ಯಾಕಂದ್ರೆ, ಸುದೀಪ್ ಮಲಯಾಂಳ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲ್ಲ. ಹೀಗಾಗಿ ಕಿಚ್ಚ, ಮಲಯಾಳಂನಲ್ಲಿ ಡಬ್ ಮಾಡಿಲ್ಲ.
ಈಗಾಗಲೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದೆ ಭಾಷೆಗಳಲ್ಲಿ ಸುದೀಪ್ ಡಬ್ ಮಾಡಿದ್ದಾರೆ. ಪೈಲ್ವಾನ್ ಸಿನಿಮಾ ಪ್ರಚಾರದ ವೇಳೆ ಸ್ವತಃ ಸುದೀಪ್ ಈ ವಿಚಾರವನ್ನ ಬಹಿರಂಗ ಪಡಿಸಿದ್ರು. ಅದೇನೇ ಆಗ್ಲಿ, ನಾಲ್ಕು ಭಾಷೆಗಳಲ್ಲಿ ಕಿಚ್ಚ ವಾಯ್ಸ್ ಡಬ್ ಮಾಡಿರೋದು ನಿಜಕ್ಕೂ ಅದ್ಭುತ..
















