ಜ್ಯೋತಿಷ್ಯ
ಹೆಣ್ಣಿಗೆ ಸೀರೆ ಯಾಕೆ ಅಂದ

ಹೆಣ್ಣಿಗೆ ಸೀರೆ ಯಾಕೆ ಅಂದ..! : ಟ್ವಿಟ್ಟರ್ ಟ್ರೆಂಡಿಂಗ್ನಲ್ಲಿ ಸೀರೆಯ ಚೆಂದ
ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಜಮಾನ. ಇಲ್ಲಿ ಯಾವ ಸುದ್ದಿ ಹೇಗೆ ವೈರಲ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಈ ಸಾಲಿಗೆ ಹೊಸ ಸೇರ್ಪಡೆ ಅಂದ್ರೆ, ಸೀರೆ.. ಯೆಸ್, ಸ್ಯಾರಿ ಟ್ವೀಟ್ ಹ್ಯಾಶ್ ಟ್ಯಾಗ್ ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿತ್ತು. ಒಂದೇ ದಿನದಲ್ಲಿ ನಾರಿ ಮಣಿಯರೆಲ್ಲಾ ಸೀರೆ ಫೋಟೋವನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿ, ಐ ಲವ್ ಸ್ಯಾರಿ ಎಂದು ಖುಷಿ ಹಂಚಿಕೊಂಡಿದ್ದಾರೆ.
ತಮಗಿಷ್ಟವಾದ ಸೀರೆಯುಟ್ಟುಕೊಂಡು ಅಥವಾ ಹಳೆಯ ಸೀರೆಯಲ್ಲಿರುವ ಫೋಟೋವನ್ನ ಮಹಿಳೆಯರು, ಯುವತಿಯರು, ಕಾಲೇಜು ಹುಡುಗಿಯರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ರು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ರಾಜಕಾರಣಿಗಳು, ಸಿನಿಮಾ ತಾರೆಯರು, ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಸೀರೆಯನ್ನು ಇಷ್ಟಪಡುವ ಬಹಳಷ್ಟು ಮಹಿಳೆಯರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ರು.
ಟ್ವಿಟ್ಟರ್ನಲ್ಲಿ ಸ್ಯಾರಿ ಹ್ಯಾಶ್ ಟ್ಯಾಗ್ ಸದ್ದು ಕಡಿಮೆ ಆಗ್ತಿದ್ದಂತೆ ಇನ್ಸ್ಟಾ ಗ್ರಾಂ ಹಾಗೂ ಫೇಸ್ ಬುಕ್ನಲ್ಲೂ ಸ್ಯಾರಿ ಲವ್ ಸ್ಟೋರಿ ಜೋರು ಸದ್ದು ಮಾಡ್ತು. ಒಟ್ನಲ್ಲಿ, ಹೆಣ್ಮಕ್ಕಳನ್ನ ಸ್ಯಾರಿಯಲ್ಲಿ ನೋಡಿದ ಹುಡುಗರು, ಸಖತ್ ಹಾಟ್ ಮಗ ಅಂತ ಖುಷಿ ಪಟ್ರಂತೆ..