“ದಿ ವೆಡ್ಡಿಂಗ್ ಗೆಸ್ಟ್” ಸಿನಿಮಾದಲ್ಲಿ
ರಾಧಿಕಾ ಆಪ್ಟೆ ರಾಸಲೀಲೆ : ಸೆಕ್ಸ್ ಸೀನ್ ಬಗ್ಗೆ ರಾಧಿಕಾ ಹೇಳಿದ್ದೇನು..?
ಸದಾ ಒಂದಿಲ್ಲೊಂದು ವಿವಾದಗಳಿಂದಲೇ
ಸುದ್ದಿಯಾಗುವ ನಟಿ ರಾಧಿಕಾ ಆಪ್ಟೆ. ತನ್ನ ಬೋಲ್ಡ್ ನಟನೆ ಮೂಲಕ ಹೆಸರಾಗಿರೋ ಬಾಲಿವುಡ್ ನಟಿ ರಾಧಿಕಾ
ಆಪ್ಟೆಯ ದಿ ವೆಡ್ಡಿಂಗ್ ಗೆಸ್ಟ್ ಸಿನಿಮಾದ ರಾಸಲೀಲೆ ದೃಶ್ಯ ಈಗ ವೈರಲ್ ಆಗಿದೆ. ಈಗಾಗಲೇ ಟ್ರೈಲರ್ನಿಂದ
ಸುದ್ದಿಯಾಗಿದ್ದ ದಿ ವೆಡ್ಡಿಂಗ್ ಗೆಸ್ಟ್ ಸಿನಿಮಾ, ಇದೀಗ ಈ ರಾಸಲೀಲೆ ದೃಶ್ಯದಿಂದ ಸಿಕ್ಕಾಪಟ್ಟೆ
ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ
ನಟಿ ರಾಧಿಕಾ ಆಪ್ಟೆ, ಜನರ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ರಾಸಲೀಲೆ ವಿಡಿಯೋ ಲೀಕ್ ಆಗಿರೋದಕ್ಕೆ
ಕೋಪಗೊಂಡಿರೋ ರಾಧಿಕಾ, ಇದು ಜನರ ಮನಸ್ಥಿತಿ ಏನು ಎಂಬುದನ್ನ ತೋರಿಸುತ್ತದೆ ಎಂದಿದ್ದಾರೆ. ಅಲ್ಲದೆ,
ಸೆಕ್ಸ್ ದೃಶ್ಯಗಳಲ್ಲಿ ನಾನೊಬ್ಬಳೇ ಅಭಿನಯಿಸಿಲ್ಲ. ದೇವ್ ಪಟೇಲ್ ಸಹ ನಟಿಸಿದ್ದಾರೆ. ಈ ಬಗ್ಗೆ ಮಾತ್ರ
ಯಾರು ಮಾತ್ನಾಡುತ್ತಿಲ್ಲ ಎಂದು ಹೇಳಿ, ಆಕ್ರೋಶವನ್ನ ಹೊರ ಹಾಕಿದ್ದಾರೆ.
ರಾಧಿಕಾ ಆಪ್ಟೆ ಈ ಹಿಂದೆ
2015ರಲ್ಲೂ ಕೂಡ ವಿವಾದ ಸೃಷ್ಟಿಸಿದ್ದರು. ಪರ್ಚೇಡ್ ಚಿತ್ರದಲ್ಲಿ ನಟಿಸಿದ್ದ ರಾಧಿಕಾ, ಆ ಸಿನಿಮಾದಲ್ಲಿ
ಆದಿಲ್ ಹುಸೈನ್ ಜೊತೆ ನಗ್ನವಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ರು. ಈ ವಿಡಿಯೋ ಸಹ ವೈರಲ್ ಆಗಿದ್ದು,
ನಟಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.
ಒಟ್ನಲ್ಲಿ ಸಿನಿಮಾಗಳು ಕಡಿಮೆ
ಮಾಡಿದ್ರೂ, ರಾಧಿಕಾ ಆಪ್ಟೆ ಮಾತ್ರ ಯಾವಾಗಲು ವಿವಾದಗಳಿಂದಲೇ ಸುದ್ದಿಯಾಗ್ತಿರ್ತಾರೆ.