ಆರೋಗ್ಯ
33ನೇ ವಯಸ್ಸಿಗೆ ರಕ್ತದೊತ್ತಡ-ಕೊಲೆಸ್ಟ್ರಾಲ್ ಇದೆಯಾ

33ನೇ ವಯಸ್ಸಿಗೆ ರಕ್ತದೊತ್ತಡ-ಕೊಲೆಸ್ಟ್ರಾಲ್ ಇದೆಯಾ..? : ಮುಂದೆ ಕಾದಿದೆ ಆಘಾತ..!?
ಹೇಳಿ ಕೇಳಿ ಇದು ಟೆನ್ಷನ್ ಜಮಾನ. ಎಲ್ಲವೂ ಒತ್ತಡದಲ್ಲೇ ನಡೆಯುತ್ತೆ. ಅದ್ರಲ್ಲೂ ನಗರ ಪ್ರದೇಶಗಳಲ್ಲಿ ಅತೀ ಹೆಚ್ಚಿನ ಒತ್ತಡ ಇರುತ್ತೆ. ಆಘಾತಕಾರಿ ಅಂಶ ಅಂದ್ರೆ, 20 ರಿಂದ 30 ವರ್ಷದೊಳಗಿನ ಯುವಕರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಕೊಬ್ಬಿನಾಂಶ ಹೆಚ್ಚಾಗಿದೆಯಂತೆ. ಹೀಗೆ ಅಧಿಕ ರಕ್ತದೊತ್ತಡ ಹಾಗೂ ಕೊಬ್ಬಿನಾಂಶ ಹೆಚ್ಚಿರುವ ಯುವಕ-ಯುವತಿಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರೋದು ಗ್ಯಾರೆಂಟಿ ಅಂತಿದೆ ಸಂಶೋಧನೆ.
ಹೌದು, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಈ ಕುರಿತು ಸಂಶೋಧನೆ ನಡೆಸಿದೆ. ಅಧಿಕ ರಕ್ತದೊತ್ತಡ ಹಾಗೂ ಕೊಬ್ಬಿನಾಂಶ ಹೊಂದಿರುವ ಯುವ ಪೀಳಿಗೆಯ ಮುಂದಿನ ಜೀವನ ಅಪಾಯದಲ್ಲಿದೆ ಎಂದು ಸಂಶೋಧನೆ ಹೇಳಿದೆ. ಹೀಗಾಗಿ 20 ರಿಂದ 30ನೇ ವಯಸ್ಸಿನ ಯುವ ಸಮುದಾಯ, ರಕ್ತದೊತ್ತಡ ಹಾಗೂ ಕೊಬ್ಬಿನಾಂಶವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದೇ ಹೋದ್ರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.
ಕೊಲಂಬಿಯಾ ವಿಶ್ವವಿದ್ಯಾಲಯ ನಡೆಸಿರೋ ಸಂಶೋಧನೆಗೆ ಒಟ್ಟು 36 ಸಾವಿರ ಜನರಿಂದ ಅಭಿಪ್ರಾಯಗಳನ್ನ ಸಂಗ್ರಹಿಸಿಲಾಗಿತ್ತು. ರಕ್ತದೊತ್ತಡ ಹಾಗೂ ಕೊಬ್ಬಿನಾಂಶ ನಿಯಂತ್ರಣದಲ್ಲಿ ಇಲ್ಲದೇ ಹೋದ್ರೆ ಹೃದಯ ವೈಫಲ್ಯ, ಹೃದಯಾಘಾತ, ವೃದ್ದಾಪ್ಯದಲ್ಲಿ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚಾಗಿರುತ್ತೆ ಎನ್ನುತ್ತೆ ಸಂಶೋಧನೆ. ಇದ್ರಿಂದಾಗಿ ಯುವ ಜನಾಂಗ ಈಗಲೇ ಎಚ್ಚುತ್ತುಕೊಂಡು, ಆರೋಗ್ಯವನ್ನ ಕಾಪಾಡಿಕೊಳ್ಳಬೇಕಿದೆ.
ಎಷ್ಟೇ ಒತ್ತಡ ಇದ್ರೂ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯನ್ನ ಬದಲಿಸಿಕೊಳ್ಳಬೇಕಿದೆ. ಇಲ್ಲದೇ ಹೋದ್ರೆ, ಬದುಕೇ ಅಪಾಯಕ್ಕೆ ದೂಡಿದಂತೆ ಆಗುತ್ತೆ. ಹೀಗಾಗಿ, ರಕ್ತದೊತ್ತಡವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಎಷ್ಟೇ ಕೆಲಸ, ಕಾರ್ಯ ಇದ್ರೂ, ಮೊದಲು ಆರೋಗ್ಯ ಮುಖ್ಯ. ಇನ್ನಾದ್ರೂ, ಯುವ ಜನಾಂಗ ಆರೋಗ್ಯದ ಕಡೆ ಗಮನ ಹರಿಸಬೇಕಿದೆ..