ಕ್ರೀಡೆ
ಟೀಂ ಇಂಡಿಯಾಗೆ ಧೋನಿ ಆಡುವುದು ಬೇಡ

ಟೀಂ ಇಂಡಿಯಾಗೆ ಧೋನಿ ಆಡುವುದು ಬೇಡ..! : ಹೆತ್ತವರಿಂದ ಅಚ್ಚರಿಯ ಹೇಳಿಕೆ
ಮುಂಬೈ : ಸಾಕಷ್ಟು ಪಯತ್ನಪಟ್ಟರೂ ಟೀಂ ಇಂಡಿಯಾ ತಂಡ ವಿಶ್ವಕಪ್ ಕ್ರಿಕೆಟ್ನಿಂದ ಸೆಮಿಫೈನಲ್ ಹಂತದಲ್ಲಿ ಹೊರಬಿತ್ತು. ಇದೇ ವೇಳೆ, ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್. ಧೋನಿ ಆಟದ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ನಿಧಾನಗತಿ ಆಟ ಹಾಗೂ ಫಾರ್ಮ್ನಲ್ಲಿ ಧೋನಿ ಇಲ್ಲ ಎಂಬ ಟೀಕೆಗಳು ಜೋರಾಗಿವೆ. ಇದ್ರಿಂದಾಗಿ ಬೇಸತ್ತಿರುವ ಧೋನಿ ಪೋಷಕರು ಕೂಡ, ಧೋನಿ ಮತ್ತೆ ಟೀಂ ಇಂಡಿಯಾದಲ್ಲಿ ಆಡುವುದು ಬೇಡ ಎಂದು ಹೇಳುತ್ತಿದ್ದಾರಂತೆ.
ಧೋನಿ ಮತ್ತೆ ಬ್ಯೂ ಜೆರ್ಸಿ ತೊಡುವುದು ಬೇಡ ಎಂದು ಪೋಷಕರೇ ಹೇಳಿದ್ದಾರೆಂದು ಕೇಶವ್ ಬ್ಯಾನರ್ಜಿ ಹೇಳಿದ್ದಾರೆ. ಕೇಶವ್ ಬ್ಯಾನರ್ಜಿ, ಧೋನಿಯ ಬಾಲ್ಯದ ಕೋಚ್. ಕೇಶವ್ ಬ್ಯಾನರ್ಜಿ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಧೋನಿ ಬ್ಯೂ ಜರ್ಸಿ ತೊಡುವುದು ಅವರ ಹೆತ್ತವರಿಗೇ ಇಷ್ಟವಿಲ್ಲ. ಧೋನಿ ಪೋಷಕರು ತನ್ನ ಬಳಿ ಮಾತ್ನಾಡಿದ್ದು, ದೇಶದ ಎಲ್ಲಾ ಮಾಧ್ಯಮಗಳಲ್ಲಿ ಇದೇ ಬರುತ್ತಿದೆ. ಧೋನಿ ನಿವೃತ್ತಿಗೆ ಇದು ಉತ್ತಮ ಸಮಯ ಎಂಬ ಅಭಿಪ್ರಾಯವನ್ನು ಹೆತ್ತವರು ಹೊರ ಹಾಕಿದ್ದಾರಂತೆ.
ಸದ್ಯ ಎಂ.ಎಸ್. ಧೋನಿ, ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಇನ್ನೂ ಕೂಡ ಏಕದಿನ ಹಾಗೂ ಟಿ20 ಕ್ವಿಕೆಟ್ ಮಾದರಿಯಲ್ಲಿ ಆಡ್ತಿದ್ದಾರೆ. ಈ ಮಧ್ಯೆ, ಬಿಸಿಸಿಐ ಆಗಲಿ, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯಾಗಲಿ, ಧೋನಿ ನಿವೃತ್ತಿ ಬಗ್ಗೆ ಯಾವುದೇ ಚರ್ಚ ನಡೆಸಿಲ್ಲ.
ನೋಡೋಣ, ಧೋನಿ ನಿರ್ಧಾರ ಏನು ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.