ಸಿನಿಮಾ
ಕಿಚ್ಚ ಸುದೀಪ್ ಹೀರೋಯಿನ್ಗೆ ಮತ್ತೆ ಲವ್ ಆಗಿದೆಯಂತೆ

ಕಿಚ್ಚ ಸುದೀಪ್ ಹೀರೋಯಿನ್ಗೆ ಮತ್ತೆ ಲವ್ ಆಗಿದೆಯಂತೆ..!
ತಮಿಳು ಸಿನಿಮಾ ಅಡಾಯ್ನಲ್ಲಿ ನಗ್ನವಾಗಿ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿರೋ ನಟಿ ಅಮಲಾ ಪೌಲ್. ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟು ಸೈ ಎನಿಸಿಕೊಂಡಿದ್ದ ನಟಿ ಅಮಲಾ ಪೌಲ್. ಈಗಾಗಲೇ ಮದುವೆ ಆಗಿ, ಗಂಡನಿಂದ ವಿಚ್ಛೇದನೆ ಪಡೆದಿರುವ ಅಮಲಾ ಪೌಲ್ಗೆ ಈಗ ಮತ್ತೆ ಲವ್ ಆಗಿದೆಯಂತೆ. ಹೀಗಂತ ಸ್ವತಃ ನಟಿ ಅಮಲಾ ಪೌಲ್ ಹೇಳಿದ್ದಾರೆ.
ಅಡಾಯ್ ಸಿನಿಮಾದ ಸದರ್ಶನವೊಂದರಲ್ಲಿ ಮಾತ್ನಾಡಿರೋ ನಟಿ ಅಮಲಾ ಪೌಲ್, ನನ್ನ ಸಿನಿಮಾದ ಸ್ಕ್ರಿಪ್ಟ್ಅನ್ನ ನನಗೆ ಬೇಕಾದ ವ್ಯಕ್ತಿ ಕೇಳುತ್ತಾರೆ. ಅವರು ಓಕೆ ಮಾಡಿದ ಮೇಲೆ ನಾನು ಪಾತ್ರಕ್ಕೆ ಮಾನಸಿಕ ಮತ್ತು ದೈಹಿಕವಾಗಿ ಸಿದ್ಧಳಾಗುತ್ತೇನೆ ಎಂದಿದ್ದಾರೆ. ಈ ಮೂಲಕ ತಾನು ಮತ್ತೊಬ್ಬ ವ್ಯಕ್ತಿಯೊಂದಿಗೆ ರಿಲೇಷನ್ಶಿಪ್ನಲ್ಲಿ ಇರೋದಾಗಿ ಹೇಳಿದ್ದಾರೆ.
ನಿರ್ದೇಶಕ ವಿಜಯ್ ಜೊತೆ ಅಮಲಾ ಪೌಲ್ ವಿವಾಹವಾಗಿ, ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದು ದೂರವಾಗಿದ್ರು. ಈಗ ಅಮಲಾ ಪೌಲ್ ಮತ್ತೊಬ್ಬ ವ್ಯಕ್ತಿ ಜೊತೆ ಲವ್ ಆಗಿರೋದಾಗಿ ಹೇಳಿದ್ದಾರೆ. ಆದ್ರೆ, ಆ ವ್ಯಕ್ತಿ ಯಾರು..? ಎಂಬುದನ್ನು ಮಾತ್ರ ಹೇಳಿಲ್ಲ. ಹೀಗಾಗಿ, ಅಮಲಾ ಪೌಲ್ ಎಲ್ಲರಲ್ಲೂ ಕುತೂಹಲ ಹುಟ್ಟಿಹಾಕಿದ್ದಾರೆ.