Connect with us

Featured

ತಲೆಹರಟೆ ಟ್ವೀಟ್‌ಗೆ ಕನ್ನಡ ಸುದ್ದಿ ಮಾಧ್ಯಮಗಳು ಕಕ್ಕಾಬಿಕ್ಕಿ : ಮೈಸೂರ್‌ಪಾಕ್‌ ತಮಿಳುನಾಡಿಗೆ ಹೋಯ್ತಲ್ಲಪ್ಪ..!

ಬೆಂಗಳೂರು: ರಾಜ್ಯದ ಸುದ್ದಿ ಮಾಧ್ಯಮಗಳಿಗೆ ನಿರ್ಮಲಾ ಸೀತಾರಾಮನ್‌ ಇವತ್ತು ಆಹಾರವಾಗಬೇಕಿತ್ತು. ಆದರೆ ಜನರ ಬಾಯಲ್ಲಿ ಚಾನೆಲ್‌ಗಳೇ ಮೇವು ಆದ ಸಂದರ್ಭಕ್ಕೆ ಇಂದು ಸಾಕ್ಷಿಯಾಯ್ತು. ತಮಿಳುನಾಡಿನ ಲೇಖಕನೊಬ್ಬ ವಿಡಂಬನಾತ್ಮಕ ಟ್ವೀಟ್‌ ಮಾಡಿದ್ದೇ ಈ ಯಡವಟ್ಟಿಗೆ ಕಾರಣ. ಇದನ್ನ ಕನ್ನಡದ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿ ನಂತರ ತುಪುಕ್‌ ಅಂತ ಲೇಖಕನಿಗೆ ಉಗಿದಿವೆ. ಏನದು ಸುದ್ದಿ ಅಂತೀರಾ ಇಲ್ಲಿದೆ ಓದಿ..

ಡಾ. ಆನಂದ್‌ ರಂಗನಾಥನ್‌ ತಮಿಳುನಾಡಿನ ಸಾಮಾನ್ಯ ಲೇಖಕ ಹಾಗೂ ಅಂಕಣಕಾರ. ಈತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ನಿಂತು, ಮೈಸೂರ್‌ ಪಾಕ್‌ ಹಿಡಿದುಕೊಂಡಂತಿರುವ ಫೋಟೋ ಟ್ವೀಟ್‌ ಮಾಡಿದ್ದಾನೆ.

https://twitter.com/ARanganathan72/status/1173505292560027648

ನಿರ್ಮಲಾ ಸೀತಾರಾಮನ್‌ ಮೈಸೂರ್‌ ಪಾಕ್‌ ತಮಿಳುನಾಡಿನದ್ದು ಎಂದು, ವಿಶ್ವಮಾನ್ಯತೆ ಅಂದರೆ ಜಿಯೋ ಟ್ಯಾಗ್‌ ನೀಡಿರೋದ್ರಿಂದ ಏಕ ಸಮಿತಿ ಸದಸ್ಯನಿಂದ ಸಿಹಿ ಮೂಲಕ ಮೆಚ್ಚುಗೆ ಎಂದು ಹಾಕಿದ್ದಾರೆ. ಇದನ್ನ ರಾಜ್ಯದ ಮಾಜಿ ಗೃಹ ಸಚಿವ ಎಂಬಿ ಪಾಟೀಲ್‌ ಕೂಡ ಶೇರ್‌ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಟ್ವೀಟ್‌ಗಳನ್ನ ನೋಡಿದ ರಾಜ್ಯದ ಟಾಪ್‌ ಚಾನೆಲ್‌ ನೇರವಾಗಿ ಅಖಾಡಕ್ಕೆ ಇಳೀತು. ಕೇಂದ್ರದ ವಿರುದ್ಧ ಹರಿಹಾಯ್ದು ಮೈಸೂರ್‌ ಪಾಕ್‌ ತಮಿಳುನಾಡಿಗೆ ಹೇಗೆ ಸೇರಿತು..? ಸಚಿವೆಗೆ ಮಾಹಿತಿ ಇಲ್ವಾ ಅಂತ ಸುದ್ದಿ ಪ್ರಸಾರ ಮಾಡಿತು.

ಟಾಪ್‌ ಚಾನೆಲ್‌ ಅನುಕರಣೆಗೆ ಇಳಿದ ಇನ್ನೊಂದಿಷ್ಟು ಚಾನೆಲ್‌ಗಳು ಇದೇ ಹಾದಿ ಹಿಡಿದವು. ಅಷ್ಟರಲ್ಲಾಗಲೇ ಟ್ವೀಟ್‌ ಮಾಡಿದ್ದ ರಂಗನಾಥನ್‌, ಮೊದಲು ನಿಲ್ಲಿಸಿ ಇದನ್ನ ಸೀರಿಯಸ್‌ ಆಗಿ ತಗೋಬೇಡಿ ಎಂದು ಟ್ವೀಟ್‌ ಮಾಡಿದರು. ಎಲ್ಲಾ ಚಾನೆಲ್‌ಗಳನ್ನ ಪುನಃ ಲೇವಡಿ ಮಾಡಿದರು.

ಈತ ರಂಗನಾಥನ್‌ ಇದೇ ಮೊದಲಲ್ಲ. ಮೈಸೂರು ಪಾಕ್‌ ವಿಚಾರದಲ್ಲಿಯೇ 2015ರಲ್ಲಿ ವಿವಾದ ಹುಟ್ಟುಹಾಕಿದ್ದರು. ಮೈಸೂರು ಪಾಕ್‌ ತಮಿಳುನಾಡಿಗೆ ಸೇರಿದ್ದು, ಇದನ್ನ ಲಾರ್ಡ್‌ ಮೆಕಾಲೆ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡಿದ್ದರು.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ