Featured
ಬಿಜೆಪಿ ಸರ್ಕಾರ ಒಂದು ವರ್ಷಕ್ಕೆ ಬೀಳಬಹುದು..? : ರೇಣುಕಾಚಾರ್ಯ ಮಾತಿನ ಅರ್ಥವೇನು..?
![](https://risingkannada.com/wp-content/uploads/2019/09/bjp.jpeg)
ದಾವಣಗೆರೆ : ರಾಜ್ಯ ಬಿಜೆಪಿ ಸರ್ಕಾರ ಮೂರು ಅಥವಾ ನಾಲ್ಕು ತಿಂಗಳಿಗೆ ಬೀಳಬಹುದು.. ಅಥವಾ ಒಂದುವರ್ಷಕ್ಕೆ ಬೀಳಬಹುದು. ಸರ್ಕಾರ ಬಿದ್ದರೆ ನಾವೆಲ್ಲಾ ಮಾಜಿಗಳಾಗ್ತೀವಿ. ಚುನಾವಣೆ ಯಾವ ವರ್ಷದಲ್ಲಿ ಬರುತ್ತೆ ಅನ್ನೋದೇ ಗೊತ್ತಿಲ್ಲ. ಹೀಗೆ ಹೇಳಿದ್ದು ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ.
ದಾವಣಗೆರೆಯಲ್ಲಿ ಶಾಲಾ ಕಾರ್ಯಕ್ರಮದಲ್ಲಿ ಮಾತ್ನಾಡಿದ ರೇಣುಕಾಚಾರ್ಯ, ನಾವು ಯಾವಾಗ ಬೇಕಾದ್ರೂ ಮಾಜಿ ಆಗ್ತೀವಿ. ಆದ್ರೆ, ಸರ್ಕಾರಿ ಅಧಿಕಾರಿಗಳು 60 ವರ್ಷ ಕೆಲಸ ಮಾಡುತ್ತಲೇ ಇರ್ತಾರೆ. ಚುನಾವಣೆಗಳು ಬಂದಾಗ, ನಾವು ಮಾಜಿ-ಹಾಲಿಗಳಾಗ್ತೀವಿ. ಆದ್ರೆ, ಅಧಿಕಾರಿಗಳು ಮಾತ್ರ ಯಾವಾಗಲು ಕೆಲಸ ಮಾಡ್ತೀರಬೇಕು ಅಂದ್ರು.
![](https://risingkannada.com/wp-content/uploads/2019/09/bjp-1.jpeg)
ರೇಣುಕಾಚಾರ್ಯ ಮಾತು ಕೆಲ ಕ್ಷಣ ಎಲ್ಲರನ್ನೂ ಆಶ್ಚರ್ಯಕ್ಕೆ ಎಡೆ ಮಾಡ್ತು. ಯಾಕಂದ್ರೆ, ಸರ್ಕಾರ ಮೂರು ಅಥವಾ ನಾಲ್ಕು ತಿಂಗಳು, ಅಥವಾ ಒಂದು ವರ್ಷಕ್ಕೆ ಬೀಳಬಹುದು ಎಂದಾಗ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದ್ರು. ಕೊನೆಗೆ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಹೋಲಿಸಿದಾಗ, ನೆಮ್ಮದಿಯ ನಿಟ್ಟುಸಿರು ಬಿಟ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?