Featured
ಲಾಡೆನ್ ಮಗ ಹತನಾಗಿದ್ದು ನಿಜ – ಟ್ರಂಪ್; ಲಾಡೆನ್‌ಗೆಷ್ಟು ಪತ್ನಿಯರು, ಮಕ್ಕಳು, ಅಲ್‌ಖೈದಾ ಅನಾಥ..?
![](https://risingkannada.com/wp-content/uploads/2019/09/AFP_1E27ZK-SUN_ED3_S01-Read-Only.jpg)
ವಾಷಿಂಗ್‌ಟನ್ ಡಿಸಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಾಡೆನ್ ಮಗನ ಸಾವಿನ ಸುದ್ದಿಯನ್ನ ಖಚಿತಪಡಿಸುವುದರ ಜೊತೆಗೆ ಎರಡು ತಿಂಗಳಿನಿಂದ ಹರಿದಾಡ್ತಿದ್ದ ಊಹಾಪೋಹಕ್ಕೆ ತೆರೆಬಿದ್ದಿದೆ.
ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ಪಾಕಿಸ್ತಾನ – ಅಪ್ಘಾನಿಸ್ತಾನ ಬಾರ್ಡರ್‌ನಲ್ಲಿ ಬಲಿಯಾಗಿದ್ದಾನೆಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಖಚಿತಪಡಿಸಿದ್ದಾರೆ.
ಆದರೆ ಹಮ್ಜಾ ಲಾಡೆನ್ ಹೇಗೆ ಮತ್ತು ಎಂತಹ ಸಂದರ್ಭದಲ್ಲಿ ಅಮೆರಿಕಾ ಸೇನೆ ಮುಗಿಸಿದೆ ಎಂಬುದನ್ನ ಮಾತ್ರ ಗೌಪ್ಯವಾಗಿ ಇಡಲಾಗಿದೆ. US President Donald Trump confirms death of Al-Qaeda heir Hamza bin Laden: AFP News Agency pic.twitter.com/ueoKftwHq9
ಲಾಡೆನ್ ೨೦೧೧ರಲ್ಲಿ ಅಮೆರಿಕದ ಸೀಲ್ ಪಡೆಯ ದಾಳಿಗೆ ಮೃತನಾದ ಬಳಿಕ ಹಮ್ಜಾ ಅಘೋಷಿತ ಉತ್ತರಾಧಿಕಾರಿಯಾದ. ಲಾಡೆನ್‌ಗೆ ಮೂವರು ಹೆಂಡತಿಯರು, ಈತ ೨೦ ಮಕ್ಕಳಲ್ಲಿ ೧೫ನೆಯವನು, ಸುಮಾರು ೩೦ ವರ್ಷ ಆಸುಪಾಸು.
ಕಳೆದ ವರ್ಷ ಸೌದಿ ಅರೆಬಿಯಾ ಮೇಲೆ ಯುದ್ಧ ಘೋಷಿಸಿ ತನ್ನ ಸದಸ್ಯತ್ವವನ್ನೂ ಕಳೆದುಕೊಂಡಿದ್ದವನು ಕಳೆದ ಜುಲೈನಲ್ಲಿ ಅಮೆರಿಕಾ ಪಡೆಗೆ ಬಲಿಯಾದ ಎಂಬ ಸುದ್ದಿ ಹರಡಿತ್ತು. ಆದರೆ ಡೊನಾಲ್ಡ್ ಟ್ರಂಪ್ ಗೌಪ್ಯವಾಗಿಟ್ಟಿದ್ದರು.
ಹಮ್ಜಾ ಲಾಡೆನ್ ಬಲಿಯಾಗುವುದರ ಮೂಲಕ ಪಾಕ್-ಅಪ್ಘಾನಿಸ್ತಾನದ ಬಾರ್ಡರ್‌ನಲ್ಲಿನ ಭಯೋತ್ಪಾದನೆ ಮತ್ತಷ್ಟು ಜಗಜ್ಜಾಹೀರಾಗಿದೆ.