Featured
ಎಣ್ಣೆ ಬದನೆಕಾಯಿ ಸಾರು ಮಾಡುವುದು ಹೇಗೆ..? ಇಲ್ಲಿದೆ ಸರಳ ವಿಧಾನ
ಬೇಕಾಗುವ ಪದಾರ್ಥಗಳು :
ಬದನೆಕಾಯಿ – 10
ಈರುಳ್ಳಿ – 1
ಬೆಳ್ಳುಳ್ಳಿ – 10 ಎಸಲು
ಚೆಕ್ಕೆ – 2 ಇಂಚು
ಲವಂಗ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ – 2 ಇಂಚು
ಹಸಿ ಮೆಣಸಿನಕಾಯಿ – 5
ತೆಂಗಿನಕಾಯಿ – 1 ಕಪ್
ಟೊಮೊಟೋ – 2
ಗೋಡಂಬಿ – 5
ಪುದೀನ -ಸ್ವಲ್ಪ
ಮೆಂತ್ಯ – 1/4 ಚಮಚ
ಗಸ ಗಸೆ -1 ಚಮಚ
ಎಣ್ಣೆ- 200 ಗ್ರಾಂ
ಉಪ್ಪು-ರುಚಿಗೆ ತಕ್ಕಷ್ಟು
ಸಾಸಿವೆ – 1 ಚಮಚ
ಕರಿಬೇವು -2 ಎಸಳು
ಮಾಡುವ ವಿದಾನ : ಮೊದಲಿಗೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ . ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಚಕ್ಕೆ , ಲವಂಗ, ಪುದಿನ, ಶುಂಠಿ, ಮೆಂತ್ಯ, ಹಾಕಿ ಬಾಡಿಸಿ. ನಂತರ ಹುರಿದಿರುವ ಪದಾರ್ಥಗಳನ್ನು ಮತ್ತು ತುರಿದಿರುವ ಹಸಿ ತೆಂಗಿನಕಾಯಿ ತುರಿಯನ್ನು ಸೆರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆದು 4ಭಾಗ ಮಾಡಿ ನೀರಿನಲ್ಲಿ ಹಾಕಿ ಇಡಬೇಕು. ಹಚ್ಚಿದ ಬದನೆಕಾಯಿಗೆ ರುಬ್ಬಿದ ಮಾಸಾಲೆಯನ್ನು ತುಂಬಬೇಕು .
ಒಗ್ಗರಣೆಗೆ : ಕುಕ್ಕರ್ ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆ , ಈರುಳ್ಳಿ, ಕರಿಬೇವು ಹಾಕಿ ಬಾಡಿಸಿ . ಅದಕ್ಕೆ ಮಾಸಾಲೆಯನ್ನು ತುಂಬಿದ ಬದನೆಕಾಯಿಯನ್ನು ಸೇರಿಸಿ ಸ್ವಲ್ಪ ಬಾಡಿಸಿ . ನಂತರ ಉಳಿದಿರುವ ಮಾಸಾಲೆಯನ್ನು ಸೇರಿಸಿ ಚೆನ್ನಾಗಿ ಕಲಸಿ ಅದು ಎಣ್ಣೆ ಬಿಡುವ ತನಕ ಕೈ ಹಾಡಿಸಬೆಕು. ಅದಕ್ಕೆ ಉಪ್ಪು ಮತ್ತು ನೀರನ್ನು ಸೇರಿಸಿ 2 ವಿಷೆಲ್ ಕುಗಿಸಿ. ನಿಮ್ಮ ಎಣ್ಣೆ ಬದನೆಕಾಯಿ ಸಾರು ಚಪಾತಿ , ಅನ್ನ ಮತ್ತು ಮುದ್ದೆಗೆ ತನ್ನಲು ರುಚಿಯಾಗಿರುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?