Featured
ಬೆಳಗಾವಿ ನೆರೆಹಾವಳಿ ಅವಲೋಕನ ಸಭೆ, ಇಂತಹ ಸಮಯದಲ್ಲೂ ಚಕ್ಕರ್ ಹಾಕಿದ ಕತ್ತಿ
![](https://risingkannada.com/wp-content/uploads/2019/09/Umesh-Katti_1200x900xt.jpg)
ಬೆಂಗಳೂರು : ಸಿಎಂ ಯಡಿಯೂರಪ್ಪ, ಬೆಳಗಾವಿ ಶಾಸಕರು ಹಾಗೂ ಅಧಿಕಾರಿಗಳೊಡನೆ ನೆರೆಹಾವಳಿ ಸಂಬಂಧ ಸಭೆ ನಡೆಸುತ್ತಿದ್ದಾರೆ ಅದರೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಾತ್ರ ಸಭೆಗೆ ಆಗಮಿಸದೇ ದೂರ ಉಳಿದು ತಮ್ಮ ಅಸಮಾಧಾನವನ್ನ ಈ ಸಂದರ್ಭದಲ್ಲೂ ಹೊರಹಾಕಿದ್ದಾರೆ.
ಪಕ್ಷದ ಶಾಸಕರು ಹಾಗೂ ಸಚಿವರಾದ ಶಶಿಕಲಾ ಜೊಲ್ಲೆ, ಕಂದಾಯ ಸಚಿವ ಆರ್.ಅಶೋಕ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ ಭಾಗಿಯಾಗಿದ್ದಾರೆ ಆದರೆ ಸಭೆಗೆ ಉಮೇಶ್ ಕತ್ತಿ ಗೈರಾಗಿದ್ದಾರೆ, ಅಷ್ಟೇ ಅಲ್ಲ ಬೆಳಗಾವಿ ಜಿಲ್ಲಾ ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದ ವೇಳೆಯೂ ಕತ್ತಿ ಗೈರಾಗಿದ್ದರು, ಇದಕ್ಕೆ ಮೂಲ ಕಾರಣ ಸಚಿವ ಸ್ಥಾನ ಸಿಗದೇ ಇರುವುದು ಎಂಬುದು ಗುಟ್ಟಾಗಿಯೇನು ಉಳಿದಿಲ್ಲ.
Continue Reading
Advertisement
You may like
Click to comment