Featured
ಮಣ್ಣಿನ ಗಣಪನ ವಿಸರ್ಜಿಸಲು ಹೋದ ಮಕ್ಕಳು, ಕೆರೆಯಲ್ಲಿ ನೀರು ಪಾಲು, ಕಣ್ಣೀರ ಕಡಲಲ್ಲಿ ಊರು.. ಛೇ..ಪಾಪ..!
![](https://risingkannada.com/wp-content/uploads/2019/09/WhatsApp-Image-2019-09-10-at-9.09.56-PM.jpg)
ಕೋಲಾರ: ಕೆಜಿಎಫ್ ಹೊರವಲಯದ ಮರದಘಟ್ಟ ಗ್ರಾಮದಲ್ಲಿ ಊರ ಹೊರಗಿನ ಕೃತಕ ಕೆರೆಗೆ ಮಣ್ಣಿನ ಆಟಿಕೆ ಗಣಪನನ್ನ ತೆಗೆದುಕೊಂಡು ಹೋದ ಆರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಇಡೀ ಊರೇ ಈಗ ಕಣ್ಣೀರ ಕಡಲಲ್ಲಿ ಮುಳುಗಿದೆ. ನಾಳೆ ಕಂದಮ್ಮಗಳನ್ನ ಸಂಸ್ಕಾರ ಮಾಡುವುದಾಗಿ ಊರ ಗ್ರಾಮಸ್ಥರು ಹೇಳಿದ್ದಾರೆ.
ತೇಜಸ್ವಿ, ವೈಷ್ಣವಿ, ವೀಣಾ, ರಕ್ಷಿತಾ, ಧನುಷ್, ರೋಹಿತ್, ಎಲ್ಲಾ ಮಕ್ಕಳೂ ಏಳರಿಂದ ಒಂಭತ್ತು ವರ್ಷದೊಳಗಿನವರು, ಮಧ್ಯಾಹ್ನ ಮಣ್ಣಿನ ಗಣೇಶನನ್ನ ಮಾಡಿ ಆಡುತ್ತಿದ್ದರು, ನಂತರ ಅದನ್ನ ವಿಸರ್ಜನೆ ಮಾಡಲು ಊರ ಹೊರಗಿನ ಕೃತಕ ಕೆರೆಗೆ ಹೋಗಿದ್ದಾರೆ. ಅಲ್ಲಿ ಕಾಲು ಜಾರಿ ಎಲ್ಲರೂ ನೀರುಪಾಲಾಗಿದ್ದು ಮಕ್ಕಳ ಶವವನ್ನ ಹೊರತೆಗೆಯಲಾಗಿದೆ.
ಅಕ್ರಮ ಕಲ್ಲುಕ್ವಾರಿಯ ಕೊಳ ಎನ್ನಲಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಮಂಜುನಾಥ್,ಎಸ್‌ಪಿ ಮೊಹಮ್ಮದ್ ಭೇಟಿ ನೀಡಿದ್ದಾರೆ. ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ ಮೃತ ಮಕ್ಕಳ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
You may like
ಸಚಿವ ಸಂಪುಟದಲ್ಲಿ ನನ್ನ ಹಸ್ತಕ್ಷೇಪ ಇಲ್ಲ : ಆದ್ರೆ, ವಲಸಿಗರಿಗೆ ಮಂತ್ರಿ ಸ್ಥಾನ ಸಿಗಬೇಕು : ಬಿಎಸ್ ಯಡಿಯೂರಪ್ಪ
ಮಗನ ಜೊತೆ ನಡ್ಡಾ, ರಾಜನಾಥ್ ಭೇಟಿಯಾದ ಯಡಿಯೂರಪ್ಪ : ಬದಲಾವಣೆ ಮುನ್ಸೂಚನೆನಾ.?
ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ
ಸ್ಮಾರ್ಟ್ ಸಿಟಿ ಯೋಜನೆ ಶೀಘ್ರವೇ ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚನೆ
ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆಯೋ.? ಪುನಾರಚನೆಯೋ..? : ಮಿನಿಸ್ಟರ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ..!
ರಾಜ್ಯಕ್ಕೆ ಅರುಣ್ ಸಿಂಗ್ ಆಗಮನ : ರಾಜ್ಯ ಬಿಜೆಪಿಯಲ್ಲಿ ತಲ್ಲಣ, ಮತ್ತೆ ಸಿಎಂ ಬದಲಾವಣೆ ಚರ್ಚೆ