Featured
ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಮತ್ತೆ ಶಾಕ್ : ಮಂತ್ರಿ ಭಾಗ್ಯ ಮರೀಚಿಕೆ ಅನ್ಸುತ್ತೆ..! ಯಾಕೆ ಗೊತ್ತಾ..?
![](https://risingkannada.com/wp-content/uploads/2019/09/17-mlas.jpg)
ನವದೆಹಲಿ/ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ನ 17 ಅನರ್ಹ ಶಾಸಕರು ಮತ್ತಷ್ಟು ದಿನ ವನವಾಸ ಅನುಭವಿಸಲೇ ಬೇಕು. ನಾಳೆ ಸುಪ್ರೀಮ್ಕೋರ್ಟ್ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರಬೇಕಿತ್ತು. ಬಂದೇ ಬರುತ್ತೆ ಅನ್ನೋ ವಿಶ್ವಾಸದಲ್ಲಿದ್ದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ಯಾಕಂದ್ರೆ, ನ್ಯಾಯಮೂರ್ತಿ ರಮಣ್ ಅವರ ಪೀಠದಲ್ಲಿದ್ದ ಅನರ್ಹ ಶಾಸಕರ ಕೇಸ್ ವಿಚಾರಣೆ, ಸೆಪ್ಟೆಂಬರ್ 17ಕ್ಕೆ ಹೋಗಿದೆ.
ಯೆಸ್, ನಾಳೆಯ ಲಿಸ್ಟ್ನಲ್ಲಿದ್ದ ಅನರ್ಹ ಶಾಸಕರ ಕೇಸ್ಅನ್ನ, ಲೀಸ್ನಿಂದ ತೆಗೆದಿದ್ದು, ಸೆಪ್ಟೆಂಬರ್ 17ಕ್ಕೆ ವಿಚಾರಣೆ ನಡೆಸೋದಾಗಿ ಕೋರ್ಟ್ ಹೇಳಿದೆ. ಇದರಿಂದಾಗಿ 17 ಅನರ್ಹ ಶಾಸಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಇನ್ನೇನು ನಾಳೆ ವಿಚಾರಣೆಗೆ ಬಂದು, ನಮಗೆ ಜಯ ಸಿಕ್ಕೇ ಸಿಗುತ್ತೆ ಎಂದುಕೊಂಡಿದ್ದ ಅನರ್ಹರಿಗೆ ಮತ್ತೆ ನಿರಾಸೆಯಾಗಿದೆ.
ಈ ನಡುವೆ, ರಾಜ್ಯ ಬಿಜೆಪಿ ಸರ್ಕಾದಲ್ಲಿ ಮಂತ್ರಿ ಸ್ಥಾನ ಹಾಗೆಯೇ ಉಳಿಸಿಕೊಂಡಿದ್ರೂ, ಅನರ್ಹರಿಗೆ ಮಂತ್ರಿ ಭಾಗ್ಯ ಸಿಗ್ತಿಲ್ಲ. ಮೂಲಗಳ ಪ್ರಕಾರ, ಬಿಜೆಪಿ ಹೈಕಮಾಂಡ್ಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರೋದೇ ಇಷ್ಟವಿಲ್ಲ ಎನ್ನಲಾಗಿದೆ. ಹೀಗಾಗಿಯೇ. ಅನರ್ಹ ಶಾಸಕರ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಾಣದಾಗಿದೆ. ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಯ ಬಿಜೆಪಿ ನಾಯಕರು ಈ ವಿಚಾರದಲ್ಲಿ ಅಷ್ಟೊಂದು ಮುತುವರ್ತಿ ತೋರಿಸ್ತಿಲ್ಲ ಎನ್ನಲಾಗಿದೆ.
ಒಟ್ಟಿನಲ್ಲಿ ಅನರ್ಹ ಶಾಸಕರ ಸ್ಥಿತಿ ಇಂಗು ತಿಂದ ಮಂಗನಂತಾಗಿದೆ ಅಂದ್ರೆ ತಪ್ಪಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?