Featured
ಬಿಜೆಪಿ ಮುಖಂಡನ ಮೇಲೆ ಸಾಲು ಸಾಲು ಅತ್ಯಾಚಾರ ಆರೋಪ: ತಾನು ನಿರ್ದೇಶಕನಾಗಿರುವ ಕಾಲೇಜಲ್ಲೇ ಹೆಚ್ಚು
ಉತ್ತರ ಪ್ರದೇಶ: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಮಂತ್ರಿ ಸ್ವಾಮಿ ಚಿನ್ಮಯಾನಂದ ನನ್ನ ಮೇಲೆ ಒಂದು ವರ್ಷಗಳ ಕಾಲ ದೈಹಿಕ ಹಿಂಸೆ ನೀಡಿದ್ದಾನೆಂದು ಸೋಮವಾರ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಹೇಳಿಕೆ ನೀಡುವುದರ ಮೂಲಕ ಈತನ ಮೇಲಿನ ಲೈಂಕಿಕ ಕಿರುಕುಳ ಪ್ರಕರಣ ಗಳು ದಿನೇ ದಿನೇ ಬೆಳೆಯತೊಡಗಿವೆ.
ಒಂದು ವಾರದ ಹಿಂದೆ, ಈತನ ಮೇಲೆ ವಿಚಾರಣೆಗೆ ಕೋರ್ಟ್ ಸೂಚಿಸಿದ ಬೆನ್ನಲ್ಲೇ ಇನ್ನೊಂದು ಆರೋಪ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ. ಚಿನ್ಮಯಾನಂದ ನಿರ್ದೇಶಕನಾಗಿರುವ ಕಾಲೇಜೊಂದರಲ್ಲೇ ಆರೇಳು ಪ್ರಕರಣಗಳು ಈತನ ಮೇಲೆ ಇವೆ, ಈಗ ಆರೋಪ ಮಾಡಿರುವ ಮಹಿಳೆ ಕೂಡ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾಳೆ. ಪದೇ ಪದೇ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರಿಂದ ಅತ್ಯಾಚಾರ ಪ್ರಕರಣಗಳು ಕೇಳಿ ಬರುತ್ತಿವೆ, ಕೆಲವು ತಿಂಗಳ ಹಿಂದೆ ಉನ್ನಾವೋ ಶಾಸಕ ಕುಲದೀಪ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿತ್ತು, ಸಂತ್ರಸ್ಥ ಮಹಿಳೆ ಅಪಘಾತಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ, ಕುಲ್‌ದೀಪ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.