Featured
ಚಿದಂಬರಂ, ಡಿಕೆಶಿ ಆಯ್ತು ಈಗ ಕಮಲ್‌ನಾಥ್ ಸರತಿ : ಪ್ರಕರಣ ಮರುತನಿಖೆ
ಮಧ್ಯಪ್ರದೇಶ: ಕಾಂಗ್ರೆಸ್ ನಾಯಕರಿಗೆ ಯಾಕೋ ಉಳಿಗಾಲವಿಲ್ಲ ಎಂಬಂತೆ ಕಾಣುತ್ತದೆ, ಒಂದು ತಿಂಗಳ ಅವಧಿಯಲ್ಲಿ ಪಿ.ಚಿದಂಬರಂ ಹಾಗೂ ಡಿಕೆ ಶಿವಕುಮಾರ್ ಕಂಬಿ ಹಿಂದೆ ಸರಿದ ನಂತರ ಮತ್ತೊಬ್ಬ ಕಾಂಗ್ರೆಸ್ ನಾಯಕನ ಮೇಲಿನ ಆರೋಪಕ್ಕೆ ಮರುಜೀವ ಬಂದಿದೆ. ೧೯೮೪ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ರನ್ನ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಸಿಖ್ ದಂಗೆಯಲ್ಲಿ ಹೊಸ ಪುರಾವೆಗಳೊಂದಿಗೆ ಕಮಲ್‌ನಾಥ್ ಮೇಲೆ ವಿಚಾರಣೆ ಶುರುಮಾಡುವ ಸಾಧ್ಯತೆ ಇದೆ. ಸಿಖ್ ಗಲಭೆಯಲ್ಲಿ ಕಮಲ್‌ನಾಥ್ ಜೊತೆ ಕಾಂಗ್ರೆಸ್ ಹಿರಿಯ ನಾಯಕರಾದ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್ ಕೂಡ ಆರೋಪಿಗಳಾಗಿದ್ದರು. ೧೯೮೪ರಲ್ಲಿ ಇಂದಿರಾಗಾಂಧಿಯನ್ನ ಅಂಗರಕ್ಷಕರೇ ಕೊಲೆ ಮಾಡಿದ ನಂತರ ಕಾಂಗ್ರೆಸ್ ಹಲವು ನಾಯಕರು ಪ್ರಚೋದನೆ ನೀಡಿದರ ಫಲವಾಗಿ ಸಿಖ್ ಗಲಭೆ ಸಾವಿರಾರು ಜನರನ್ನ ಬಲಿತೆಗೆದುಕೊಂಡಿತ್ತು, ವಾಜಪೇಯಿ ಸರ್ಕಾರ ನಾನಾವತಿ ಕಮಿಷನ್ ರಚನೆ ಮಾಡಿ ವರದಿ ನೀಡಲು ಕೇಳಿತ್ತು, ಈ ವರದಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಹೆಸರಿರಲಿಲ್ಲವಾದರೂ ಇವರೆಲ್ಲಾ ಸ್ಥಳದಲ್ಲಿದ್ದರು ಎಂಬ ಅಂಶವನ್ನ ತಿಳಿಸಿತ್ತು.
ಕಾಂಗ್ರೆಸ್ ನ ನಾಯಕರನ್ನ ಸಿಖ್ ಸಮುದಾಯ ಆರೋಪಿಗಳನ್ನಾಗಿ ಮಾಡಿ, ನಿರಂತರವಾಗಿ ಪುರಾವೆ ನೀಡುತ್ತಾ ಬಂದಿದ್ದವು, ಹಾಗೂ ಗೃಹ ಸಚಿವಾಲಯಕ್ಕೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಮನವಿ ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಹೋಗಿ ಕಾಂಗ್ರೆಸ್ ಬಂದಾಗ ಸಿಎಂ ಸ್ಥಾನಕ್ಕೆ ಕಮಲ್‌ನಾಥ್ ಮೊದಲಿಗರಾದರು. ಅಂದೂ ಕೂಡ ಸಿಖ್ ಸಮುದಾಯ ಪ್ರತಿಭಟನೆ ಮಾಡಿತ್ತು.
You may like
ಯಾಮಾರಿದ್ರೆ ಎಲ್ಲರಿಗೂ ಬರುತ್ತೆ ಕೊರೊನಾ..! ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಕೋವಿಡ್19 ಪಾಸಿಟಿವ್..!
ವಿದ್ಯುತ್ ಬಳಕೆಗೆ ಗುಡ್ ಬೈ- ಸೋಲಾರ್ ಪವರ್ನಲ್ಲಿ ಓಡಲಿದೆ ಟ್ರೇನ್- ಇಂಡಿಯನ್ ರೈಲ್ವೇಯ ಹೊಸ ಸಾಹಸ
ಮೇಲುಕೋಟೆಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ – ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಡಾ. ನಾರಾಯಣ ಗೌಡ
ನಿಮಗೆ ಗೊತ್ತಿರಲಿ, ಬಿಜೆಪಿ ಹಾಗೂ ಭಜರಂಗದಳ ಪಾಕ್ ನ ISIನಿಂದ ಹಣ ಪಡೀತಿವೆ : ದಿಗ್ವಿಜಯ ಸಿಂಗ್