Featured
ವಿಶ್ವದ ಅತ್ಯಂತ ಚಿಕ್ಕ ಕುದುರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು : ಇದರ ವಿಶೇಷತೆಗಳೇನು ಗೊತ್ತಾ..?

ರೈಸಿಂಗ್ ಕನ್ನಡ ಸ್ಪೆಷಲ್ : ಇದು ವಿಶ್ವದಲ್ಲೇ ಅತ್ಯಂತ ಚಿಕ್ಕ ಕುದುರೆ. ಇಷ್ಟರ ಮಟ್ಟಿಗೆ ಅಂದ್ರೆ, ನಾಯಿಗಿಂತಲೂ ಚಿಕ್ಕದಾಗಿರೋ ಕುದುರೆ ಇದು. ಆದ್ರೆ, ಮೂರ್ತಿ ಚಿಕ್ಕದಾದರೂ ಇದರ ಕೀರ್ತಿ ಮಾತ್ರ ದೊಡ್ಡದಾಗಿಯೇ ಇದೆ. ಈ ಕುದುರೆ ಹೆಸರು ಬಾಂಬೆಲ್. ಪೋಲ್ಯಾಂಡ್ನಲ್ಲಿರೋ ಈ ಕುದುರೆ, ಅತ್ಯಂತ ಚಿಕ್ಕ ಕುದುರೆ ಎಂಬ ಕೀರ್ತಿಗೆ ಪಾತ್ರವಾಗಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ.
ಬಾಂಬೆಲ್, ತನ್ನ ಗೊರಸಿನಿಂದ ಭುಜದವರೆಗೆ ಕೇವಲ 56.7 ಸೆಂಟಿ ಮೀಟರ್ನಷ್ಟೇ
ಉದ್ದವಿದೆ. ಅಂದ್ರೆ, ಸುಮಾರು 1 ಅಡಿ. ಸದ್ಯ ಬಾಂಬೆಲ್ ದೊಡ್ಡ ದೊಡ್ಡ ಕುದುರೆಗಳ ಜೊತೆ ಫಾರ್ಮ್ವೊಂದರಲ್ಲಿದೆ.
ಪೆಟ್ರಿಕ್ ಇದರ ಮಾಲೀಕರು. 2014ರಲ್ಲಿ ಎರಡು ತಿಂಗಳ ಮರಿಯಾಗಿದ್ದಾಗ ಹೇಗಿತ್ತೋ, ಈಗಲೂ ಅದೇ ರೀತಿ
ಇದೆ ಅಂತಾರೆ ಪೆಟ್ರಿಕ್. ನಾವು ಏನೆಲ್ಲಾ ಪ್ರಯತ್ನ ಮಾಡಬೇಕೋ, ಎಲ್ಲವನ್ನೂ ಮಾಡಿದ್ವಿ. ಬಹುಶಃ ಬೆಳೆಯುತ್ತೆ
ಅನ್ನೋ ನಿರೀಕ್ಷೆ ಇತ್ತು. ಆದ್ರೆ, ಅದು ಬೆಳೆಯಲೇ ಇಲ್ಲ. ಹೀಗಾಗಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್
ಬುಕ್ಗೆ ಸೇರಿಸಿದ್ವಿ ಎಂದು ವಿವರಿಸ್ತಾರೆ ಪೆಟ್ರಿಕ್.
ಬಾಂಬೆಲ್, ಅತ್ಯಂತ ಚಿಕ್ಕ ಕುದುರೆ ಅಂತ ಬಿರುದು ಪಡೆದ್ಮೇಲೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಹಲವು ಮಂದಿ ವಿವಿಧ ರೀತಿಯಾಗಿ ಕಾಮೆಂಟ್ ಮಾಡಿದ್ದು, ಈ ಜಗತ್ತಿನಲ್ಲಿ ಏನೆಲ್ಲಾ ಇದೆ ಎಂದಿದ್ದಾರೆ.
ಈ ಸ್ಟೋರಿ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಸಲಹೆಯನ್ನ ಕಾಮೆಂಟ್ ಮಾಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?