Featured
ಮೆಜೆಸ್ಟಿಕ್ ಅಂಡರ್‌ಪಾಸ್ ಅನೈತಿಕ ತಾಣ: ಹೆಣ್ಣುಮಕ್ಕಳು ಓಡಾಡೋದೇ ಕಷ್ಟ: ರವಿ ಬೆಳಗೆರೆ
![](https://risingkannada.com/wp-content/uploads/2019/09/Untitled-1.jpg)
ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ಮೆಜೆಸ್ಟಿಕ್ ಅಂಡರ್‌ಪಾಸ್‌ನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು ಹೀಗೆ
ಮೆಜೆಸ್ಟಿಕ್ ನ ಸಿಟಿ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ಮತ್ತು ಮೆಟ್ರೋ ಸ್ಟೇಷನ್ ಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಈಗ ಖಾಲಿ ಖಾಲಿ. ಇಷ್ಟು ದಿನ ಅಲ್ಲಿ ವ್ಯಾಪಾರಿಗಳು ಇರುತ್ತಿದ್ದರು. ಜನರು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಅವರನ್ನು ಎಬ್ಬಿಸಿ ಕಳುಹಿಸಲಾಗಿದೆ. ಹೀಗಾಗಿ ಅಲ್ಲಿ ನಿಶ್ಯಬ್ಧದ ವಾತಾವರಣವಿದ್ದು ವೇಶ್ಯೆಯರು, ಹಿಜಡಾಗಳ ಅಡ್ಡೆಯಾಗಿದೆ. ಕೆಲ ಗಂಡಸರು ಅವರ ಜೊತೆ ಮಾತನಾಡುತ್ತಾ ನಿಂತಿರುತ್ತಾರೆ. ಇದರಿಂದ ಸಭ್ಯ ಹೆಣ್ಣು ಮಕ್ಕಳು ಇಲ್ಲಿ ಓಡಾಡುವುದಕ್ಕೆ ಹೆದರುವಂತಾಗಿದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಈ ಕುರಿತು ಗಮನಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಮೆಜೆಸ್ಟಿಕ್ ಆಸುಪಾಸು, ಅಲ್ಲಿಂದ ರೈಲ್ವೇಸ್ಟೇಷನ್ ಅಂಡರ್‌ಪಾಸ್‌ನಲ್ಲಿ ವೇಶ್ಯೆಯರು, ಹಿಜಡಾಗಳು ಹಾಗೂ ಲಲ್ಲೆ ಹೊಡೆಯುತ್ತಾ ನಿಂತಿರುವ ಅಸಭ್ಯರಿಂದ ನಿಜಕ್ಕೂ ಮುಜುಗರವಾಗುತ್ತಿರುವುದು ಸಾಕಷ್ಟು ಸಲ ಬಹಿರಂಗವಾಗಿದೆ. ಪೊಲೀಸ್ ಇಲಾಖೆ ವ್ಯಾಪಾರಿಗಳನ್ನಷ್ಟೇ ಆಲ್ಲ ಇಂತಹ ಕಸುಬುದಾರರನ್ನೂ ಓಡಿಸಬೇಕಿದೆ.