Featured
ಅನರ್ಹರು ನನ್ನ ನಂಬಿ ರಾಜೀನಾಮೆ ನೀಡಿದ್ರು, ಅವರ ಪರವಾಗಿ ದೆಹಲಿ ಅಲೆದೆ: ರಮೇಶ್
![](https://risingkannada.com/wp-content/uploads/2019/09/16-Ramesh-Jarkiholi.jpg)
ಗೋಕಾಕ್: ೨೦ ಶಾಸಕರು ನನ್ನ ನಂಬಿ ರಾಜೀನಾಮೆ ನೀಡಿದ್ದರಿಂದ ಅವರ ಪರವಾಗಿ ದೆಹಲಿಗೆ ಹೋಗಿ ಬರುತ್ತಿದ್ದೆ ಹಾಗಾಗಿ ಪ್ರವಾಹ ಸಂದರ್ಭದಲ್ಲಿ ಕ್ಷೇತ್ರದ ಕಡೆಗೆ ಗಮನ ನೀಡಲು ಆಗಲಿಲ್ಲ, ಮಾಧ್ಯಮಗಳು ಪ್ಯಾಕೇಜ್ ಸುದ್ದಿ ಮಾಡಿವೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಂಕಲ್ಪ ಸಮಾವೇಶದಲ್ಲಿ ಅವಲತ್ತುಕೊಂಡಿದ್ದಾರೆ.
ನಾನು ಹಣಕ್ಕಾಗಿ ರಾಜೀನಾಮೆ ನೀಡಿಲ್ಲ, ಸಮ್ಮಿಶ್ರ ಸರ್ಕಾರದ ಆಂತರಿಕ ವ್ಯವಸ್ಥೆಗೆ ಹೆದರಿಕೊಂಡಿದ್ದೆವು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯನವರಿದ್ದರೂ ಏನೂ ಮಾಡಲಾಗದ ಸ್ಥಿತಿ ಇತ್ತು, ಆಪರೇಷನ್ ಕಮಲಕ್ಕೆ ನೇರ ಕಾರಣ ಸತೀಶ್ ಜಾರಕಿಹೊಳಿ ಹಾಗೂ ಎಂಬಿ ಪಾಟೀಲ್ ಎಂದರು.
ಇನ್ನು ಡಿಕೆ ಶಿವಕುಮಾರ್ ವಿರುದ್ಧವಾಗಿ ಹೋಮ ಹವನ ಮಾಡಿಸಿದ್ದೇನೆ ಎಂಬುದು ಸುಳ್ಳು, ಆತ ನನ್ನ ಸ್ನೇಹಿತ, ಕಾನೂನು ಸಮರದಲ್ಲಿ ಗೆದ್ದು ಬರಲಿ, ನಾನು ಯಾವ ಪಕ್ಷಕ್ಕೆ ಸೇರಬೇಕು ಎಂಬುದು ನಿರ್ಧರಿತವಾಗಿಲ್ಲ, ಕೋರ್ಟ್ ಮುಂದೆ ವ್ಯಾಜ್ಯೆ ಇರೋದ್ರಿಂದ ತೀರ್ಮಾನವಾದ ಮೇಲೆ ಯೋಚನೆ ಮಾಡ್ತೀನಿ ಎಂದರು.
Continue Reading
Advertisement
You may like
Click to comment