Featured
ಸಿಟ್ಯಾಕೆ ಸಿಡುಕ್ಯಾಕೆ CM ಸಾಹೇಬ್ರೇ..! ಯಡಿಯೂರಪ್ಪ ಮನೆಗೆ ಮಾಧ್ಯಮಗಳ ನಿರ್ಬಂಧ ಯಾಕೆ..?

ಬೆಂಗಳೂರು : ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಮಾಡಲಾಗಿತ್ತು. ಆಗ ಬಿ.ಎಸ್. ಯಡಿಯೂರಪ್ಪ ಅವರೇ ಖಂಡಿಸಿದ್ರು. ಈಗ ಇದೇ ಯಡಿಯೂರಪ್ಪ ಸಿಎಂ ಆಗಿದ್ದು ಅದ್ಯಾಕೋ, ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ವಿಧಾನಸೌಧವಲ್ಲ, ತಮ್ಮ ಮನೆ ಬಳಿಯೂ ಮಾಧ್ಯಮಗಳಿಗೆ ನಿರ್ಬಂಧ ಹಾಕಿದ್ದಾರೆ.
ಯೆಸ್, ಬಿಎಸ್‌ವೈ ನಿವಾಸದ ರಸ್ತೆಗೆ ಮಾಧ್ಯಮದವರಿಗೆ ನೋ ಎಂಟ್ರಿ. ಯಡಿಯೂರಪ್ಪ ಮನೆ ಬಳಿಯವರೆಗೂ ಮಾಧ್ಯಮಗಳಿಗೆ ಎಂಟ್ರಿ ಕೊಡಬೇಡಿ ಎಂದು ಭದ್ರತಾ ಸಿಬ್ಬಂದಿಗೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ, ಸಿಎಂ ಸೂಚನೆ ಇದೆ ಮಾಧ್ಯಮಗಳನ್ನ ಬಿಡೋದಿಲ್ಲ ಎಂದು ಪೊಲೀಸರೇ ಹೇಳ್ತಿದ್ದಾರೆ.
ಈ ಮಿದಲಿನಿಂದ ಬಿಎಸ್‌ವೈ ಸಿಎಂ ಆದ ಮೇಲೂ, ಅವರ ನಿವಾಸದವರೆಗೂ ಮಾಧ್ಯಮಗಳಿಗೆ ಎಂಟ್ರಿ ಇತ್ತು. ಆದ್ರೀಗ ದಿಢೀರ್ ಎಂದು ಮಾಧ್ಯಮಗಳಿಗೆ ಸಿಎಂ ನಿರ್ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ, ಪ್ರತಿ ದಿನ ಅಂಗವಿಕಲರು, ಹಲವರು ಕಷ್ಟ ಎಂದು ಯಡಿಯೂರಪ್ಪ ಮನೆ ಬಳಿ ಬರುತ್ತಾರೆ. ಆದ್ರೆ ಹಲವು ಬಾರಿ, ಸಿಎಂ ಮನೆ ಸಿಬ್ಬಂದಿ ಕಷ್ಟ ಎಂದು ಬಂದವರನ್ನು ಆಚೆ ನಿಲ್ಲಿ, ದೂರ ನಿಲ್ಲಿ ಎಂದು ಬೆದರಿಸಿದ್ದು ಇದೆ. ಈ ಬಗ್ಗೆ ಕೆಲವು ಮಾಧ್ಯಮಮಗಳು ವರದಿ ಮಾಡಿದ ಹಿನ್ನಲೆಯಲ್ಲಿ,
ಮಾಧ್ಯಮಗಳ ಮೇಲೆ ಸಿಎಂ ಯಡಿಯೂರಪ್ಪ ಸಿಟ್ಟಾಗಿ, ನಿರ್ಬಂಧದ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















