Featured
ಅವಳಿ ಮಕ್ಕಳನ್ನು ಹೆತ್ತ 74ರ ಹಿರಿಯಜ್ಜಿ..! ಅಚ್ಚರಿಯಾದ್ರೂ ಸತ್ಯ..?

ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಆಡಿಸಬೇಕಾದ ವಯಸ್ಸಲ್ಲಿ ವೃದ್ಧ ಮಹಿಳೆಯೊಬ್ಬರು ತಾಯಿ ಆಗಿರೋ ಅಪರೂಪದ ಘಟನೆ ಹೈದರಾಬಾದಿನಲ್ಲಿ ನಡೆದಿದೆ. 74 ವರ್ಷದ ವೃದ್ಧ ಮಹಿಳೆ ಎರ್ರಮಟ್ಟಿ ಮಂಗಯ್ಯಮ್ಮ, ಒಂದಲ್ಲ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಕೃತಕ ಗರ್ಭಧಾರಣೆ ಮೂಲಕ ಅವಳಿ ಮಕ್ಕಳನ್ನು ಹೆತ್ತಿರೋ ಈ ಮಹಾತಾಯಿ, ಅತ್ಯಂತ ಹಿರಿಯ ವಯಸ್ಸಿನಲ್ಲಿ ತಾಯಿಯಾಗಿ, ಮಗು ಹಡೆದ ಕೀರ್ತಿ, ದಾಖಲೆಗೆ ಪಾತ್ರರಾಗಿದ್ದಾರೆ.
ಎರ್ರಮಟ್ಟಿ ಮಂಗಯ್ಯಮ್ಮ ಆಂಧ್ರದ ಗೋದಾವರಿ ಜಿಲ್ಲೆಯ ನೆಲಪರ್ತಿಪಡು ಗ್ರಾಮದವರು. ಗಂಡ ರಾಜಾರಾಮ್ ಗೆ 80 ವರ್ಷ. ಗುರುವಾರ ಬೆಳಗ್ಗೆ ಸುಮಾರು 10.30ಕ್ಕೆ ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ವಯಸ್ಸು 74 ಆಗಿದ್ದರೂ, ಮಂಗಯ್ಯಮ್ಮಗೆ ಯಾವುದೇ ರೀತಿಯ ಕಾಯಿಲೆಗಳು ಇರಲಿಲ್ಲ. ಹೀಗಾಗಿ ತಾಯಿ ಆರೋಗ್ಯವಾಗಿದ್ದಾರೆ. ಆದ್ರೆ, ಮಗುವಿಗೆ ಎದೆಹಾಲು ನೀಡಲು ಸಾಧ್ಯವಿಲ್ಲ. ಎಸೆಹಾಲಿನ ಬ್ಯಾಂಕ್ ನಿಂದ ಹಾಲು ತಂದು ಮಕ್ಕಳಿಗೆ ನೀಡಲಾಗುತ್ತೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
1962ರಲ್ಲಿ ಮಂಗಯ್ಯಮ್ಮ ಮದುವೆ ಆಗಿದ್ರು. ಅಂದಿನಿಂದ ಮಕ್ಕಳಿಲ್ಲ ಅನ್ನೋ ಕೊರಗು ದಂಪತಿಯನ್ನ ಕಾಡ್ತಿತ್ತು. ಎಲ್ಲೋ ಒಮ್ಮೆ 55 ವರ್ಷದ ಮಹಿಳೆ ಮಗು ಹೆತ್ತ ಸುದ್ದಿ ನೋಡಿ, ಕೃತಕ ಗರ್ಭಧಾರಣೆ ಮಾಡಿಸಲು ಮುಂದಾಗಿದ್ದರು. ಋತುಚಕ್ರ ನಿಂತಿದ್ದರಿಂದ, ದಾನಿಯಿಂದ ಅಂಡಾಣು ಪಡೆದು, ಪತಿ ರಾಜಾರಾವ್ ಅವರದ್ದೇ ವೀರ್ಯಾಣು ಬಳಿಸಿ, ಕೃತಕ ಗರ್ಭಧಾರಣೆ ಮಾಡಲಾಯ್ತು. ಈ ವಯಸ್ಸಿನಲ್ಲಿ ನಾರ್ಮಲ್ ಡೆಲಿವರಿ ಮಾಡಲು ಸಾಧ್ಯವಾಗದ ಕಾರಣ, ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?