Featured
ಇಂಟರ್‌ನೆಟ್ ʻದೈತ್ಯʼ, ʻಜಿಯೋ ಫೈಬರ್ʼ ಅಧಿಕೃತ ಸೇವೆ ಆರಂಭ: ನಿಮ್ಮೆಲ್ಲಾ ಪ್ರಶ್ನೆಗಳಿಗಿಲ್ಲಿದೆ ಉತ್ತರ
![](https://risingkannada.com/wp-content/uploads/2019/09/jiofiber-launch-759.jpg)
ನವದೆಹಲಿ: ಒಂದು ವರ್ಷದ ಕಾಯುವಿಕೆಗೆ ಕೊನೆಗೂ ಬ್ರೇಕ್ ಬಿದ್ದಿದ್ದು ಜಿಯೋ ಫೈಬರ್ ಹೈಸ್ಪೀಡ್ ಡೇಟಾ ನೆಟ್ವರ್ಕ್ ಅಧಿಕೃತವಾಗಿ ಚಾಲನೆಯಾಗಿದೆ, ಒಂದು ತಿಂಗಳ ಹಿಂದೆಯೇ ಆಯ್ದ ನಗರಗಳಲ್ಲಿ ಇಂಟರ್‌ನೆಟ್ ಕೇಬಲ್ ಅಳವಡಿಕೆಯ ಪ್ರಯೋಗ ನಡೆದಿತ್ತು. ಮುಖೇಶ್ ಅಂಬಾನಿಯ ಮಹಾತ್ವಾಕಾಂಕ್ಷೆಯ ಯೋಜನೆ ಫೈಬರ್ ಟು ದಿ ಹೋಮ್ ( FTTH) ಅಂದರೆ ಡಿಟಿಎಚ್ (DTH) ಮಾದರಿಯಲ್ಲಿ ಇಂಟರ್‌ನೆಟ್ ಹಾಗೂ ಕೇಬಲ್ ಸೇವೆಗೆ ಸೆ.5ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ಕಂಪನಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ಲಾನ್‌ಗಳ ವಿವರ ಹಾಗೂ ದರ ನಮೂದಿಸಿದೆ, ಮೊದಲ ಹಂತದಲ್ಲಿ 1600 ನಗರದಲ್ಲಿ ಜಿಯೋ ಫೈಬರ್ ಸೇವೆ ಲಭ್ಯವಿರಲಿದೆ, ಒಟ್ಟು ಆರು ಆಯ್ಕೆಗಳು ಲಭ್ಯವಿದೆ, ಬ್ರಾಂಜ್ ಪ್ಲಾನ್ ಕೇವಲ ಮಾಸಿಕ 699ರೂಪಾಯಿ ಅನ್‌ಲಿಮಿಟೆಡ್ ಡೇಟಾ ( 100ಜಿಬಿವರೆಗೆ ನಮೂದಿತ ಸ್ಪೀಡ್) , ಸಿಲ್ವರ್ ಪ್ಲಾನ್ 849 ರೂ, ಗೋಲ್ಡ್ ಪ್ಲಾನ್ 1299 ರೂ, ಡೈಮಂಡ್ ಪ್ಲಾನ್ 2499 ರೂ, ಪ್ಲಾಟಿನಂ ಪ್ಲಾನ್ 3999 ಹಾಗೂ ಟೈಟನಿಯಮ್ ಪ್ಲಾನ್ 8499ರೂಗೆ ಲಭ್ಯವಿದೆ. ಕೊನೆಯ ಎರಡು ಪ್ಲಾನ್‌ಗಳು ಪ್ರತಿ ಸೆಕೆಂಡ್‌ಗೆ 1ಜಿಬಿ ಸ್ಪೀಡ್ ಇರಲಿದೆ. ಈ ಎಲ್ಲಾ ಪ್ಲಾನ್‌ಗಳಲ್ಲಿ ಡೊಮೆಸ್ಟಿಕ್ ವಾಯ್ಸ್ ಕಾಲ್ ಉಚಿತವಾಗಿ ಇರಲಿದೆ ಅಂದರೆ ಕಂಪನಿ, ಮನೆ, ಕಚೇರಿಗೆ ಲ್ಯಾಂಡ್‌ಲೈನ್ ಸೇವೆ ಉಚಿತ, ಐದು ಡಿವೈಸ್‌ಗೆ ಆಂಟಿ ವೈರಸ್ ಸೌಲಭ್ಯ, ದುಬಾರಿ ಪ್ಲಾನ್‌ಗಳಲ್ಲಿ ಹೊಸ ಸಿನಿಮಾಗಳನ್ನ ಉಚಿತವಾಗಿ ಫಸ್ಟ್ ಡೇ ಫಸ್ಟ್ ಶೋ ತರಹ ನೋಡಬಹುದು.
![](https://risingkannada.com/wp-content/uploads/2019/09/EDtDnbfUEAA9Hqu-1024x853.jpg)
ಜಿಯೋ ಧಮಾಕ ; ರಿಲಾಯನ್ಸ್ ಜಿಯೋ ಆರಂಭಿಕ ಗ್ರಾಹಕರಿಗೆ ಭರಪೂರ ಕೊಡುಗೆ ಘೋಷಣೆ ಮಾಡಿದೆ, ಜಿಯೋ ಪಾರೆವರ್ ಆನ್ಯುಯಲ್ ಆಫರ್‌ನಲ್ಲಿ ಜಿಯೋ ಹೋಂ ಗೇಟ್‌ವೇ, ಹಾಗೂ ಉತ್ಕೃಷ್ಟ ಕ್ವಾಲಿಟಿಯ ಸೆಟ್‌ಆಫ್ ಬಾಕ್ಸ್ ಹಾಗೂ ಎರಡು ತಿಂಗಳ ಉಚಿತ ಸೇವೆ ಲಭ್ಯವಿರಲಿದೆ, ಗೋಲ್ಡ್ ಪ್ಲಾನ್ ಗ್ರಾಹಕರಿಗೆ ಎರಡು ಬ್ಲೂಟೂಥ್ ಸ್ಪೀಕರ್‌ಗಳು ಉಚಿತವಾಗಿ ಸಿಗಲಿವೆ, ಡೈಮಂಡ್ ಹಾಗೂ ಪ್ಲಾಟಿನಂ ಹೈ ಡೆಫಿನೀಷನ್ ಟಿವಿ ಹಾಗೂ ಗೋಲ್ಡ್ ಪ್ಲಾನ್ ಗ್ರಾಹಕರು 24 ಇಂಚಿನ ಹೈ ಡೆಫಿನೀಷನ್ ಟಿವಿ (HDTV) ಉಚಿತವಾಗಿ ಪಡೆಯಲಿದ್ದಾರೆ. ಇನ್ನು ಟೈಟನಿಮ್ ಗ್ರಾಹಕರಿಗೆ ಬರೊಬ್ಬರಿ 43 ಇಂಚಿನ 4K ಟಿವಿ ಸಿಗಲಿದೆ. ಆದರೆ ಈ ಗ್ರಾಹಕರು ಎರಡು ವರ್ಷ ಕಡ್ಡಾಯ ಕನೆಕ್ಷನ್ ಪಡೆಯಬೇಕು.
ಹೇಗೆ ಕನೆಕ್ಷನ್ ಪಡೆಯೋದು..? ಕಂಪನಿಯ ಮೈ ಜಿಯೋ ವೆಬ್‌ಸೈಟ್‌ಲ್ಲಿ (www.myjio.com) ರಿಜಿಸ್ಟರ್ ಮಾಡಬೇಕು, ಎರಡು ಸಾವಿರದ ಐನೂರು ರೂಪಾಯಿ ನೀಡಿ ಬುಕ್ ಮಾಡಬೇಕು, ನಿಮ್ಮ ನಗರದಲ್ಲಿ ಸೇವೆ ಇದೆಯೋ ಇಲ್ಲವೋ ಎಂಬುದು ಇಲ್ಲೇ ತಿಳಿಯುತ್ತೆ. ಎರಡುಸಾವಿರದ ಐನೂರಲ್ಲಿ ಸಾವಿರದ ಐನೂರು ಕನೆಕ್ಷನ್ ಕಡಿತಗೊಳಿಸಿದರೆ ಮರುಪಾವತಿ ಮಾಡಲಾಗುತ್ತೆ, ಸಾವಿರ ರೂಪಾಯಿ ರೌಟರ್ ಹಾಗೂ ಇತರೆ ಖರ್ಚಿಗಾಗಿ ಜಮಾ ಮಾಡಲಾಗುತ್ತೆ.