Featured
ತಿಹಾರ್ ಜೈಲಿಗೆ ಹೋಗ್ತಿದ್ರೂ ಆರ್ಥಿಕ ವ್ಯವಸ್ಥೆ ಸರಿ ಮಾಡಿ ಅಂದ್ರು ಚಿದಂಬರಂ..!
ನವದೆಹಲಿ : ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಈಗ ತಿಹಾರ್ ಜೈಲು ಪಾಲಾಗಿದ್ದಾರೆ. ಆದ್ರೆ, ವಿಚಿತ್ರ ಅಂದ್ರೆ, ಇವತ್ತು ಸಂಜೆ ತಿಹಾರ್ ಜೈಲಿಗೆ ಹೋಗ ಸಂದರ್ಭದಲ್ಲಿ ಮಾತ್ನಾಡಿರೋ ಚಿದಂಬರಂ, ನನಗೆ ದೇಶದ ಆರ್ಥಿಕ ವ್ಯವಸ್ಥೆಯದ್ದೇ ಚಿಂತೆ. ಅದು ಬಿಟ್ರೆ ಬೇರೇನು ನನಗೆ ಚಿಂತೆ ಇಲ್ಲ ಎನ್ನುವ ಮಾಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
INX ಮೀಡಿಯಾ ಹಗರಣದಲ್ಲಿ ಚಿದಂಬರಂಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಕ ಬಂಧನ ವಿಧಿಸಿ, ಇವತ್ತು ವಿಶೇಷ ಕೋರ್ಟ್ ನ್ಯಾಯಾಧೀಶರಾದ ಅಜಯ್ ಕುಮಾರ್ ಕಹಾರ್ ಆದೇಶ ನೀಡಿದ್ರು. ಆದೇಶದ ಬಳಿಕ ಚಿದಂಬರಂ ಅವರನ್ನ ತಿಹಾರ್ ಜೈಲಿಗೆ ರವಾನೆ ಮಾಡಲಾಯ್ತು. ಈ ವೇಳೆ, ಕೆಲವೇ ಸೆಕೆಂಡುಗಳ ಕಾಲ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ್ನಾಡಿದ ಚಿದಂಬರಂ, ನನಗೆ ದೇಶದ ಆರ್ಥಿಕತೆಯದ್ದೇ ದೊಡ್ಡ ಚಿಂತೆ ಎಂದು ಹೇಳಿದ್ರು.
ಮಂಗಳವಾರಕ್ಕೆ ಚಿದಂಬರಂ ಅವರ ಸಿಬಿಐ ಕಸ್ಟಡಿ ಎಂಡ್ ಆಗಿತ್ತು. ಈ ಬಗ್ಗೆ ವರದಿಗಾರು ಚಿದಂಬರಂ ಅವರನ್ನ ಏನಾದ್ರೂ ಹೇಳ್ತಿರಾ ಎಂದಾಗ, ನನಗೆ ಶೇಕಡಾ 5ರದ್ದೇ ಚಿಂತೆ ಎಂದಿದ್ರು. ನಿಮಗೆ ಗೊತ್ತಾ..? ಶೇಕಡಾ 5 ಅಂದ್ರೆ ಏನು..? ಅದೇ ಜಿಡಿಪಿ ಎಂದು ಉತ್ತರ ನೀಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?