Featured
ಮನೆ ಬಾಗಿಲಿಗೆ ಕ್ವಾಲಿಟಿ ಮದ್ಯ ಪೂರೈಕೆಗೆ ಚಿಂತನೆ: ಸಚಿವ ಎಚ್.ನಾಗೇಶ್

ಬೆಂಗಳೂರು: ಅಬಕಾರಿ ಸಚಿವ ಎಚ್.ನಾಗೇಶ್ ವಿಶಿಷ್ಟವಾದ ಚಿಂತನೆಯೊಂದನ್ನ ಕಾರ್ಯರೂಪಕ್ಕೆ ತರಲು ಚರ್ಚಿಸಿದ್ದಾರೆ, ಅಬಕಾರಿ ಸಚಿವರಾದ ಮೇಲೆ ವಿಕಾಸಸೌಧದಲ್ಲಿ ರಾಜ್ಯಮಟ್ಟದ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೆ, ಸರ್ಕಾರಿ ಸ್ವಾಮ್ಯದ ವೈನ್ ಶಾಪ್‌ಗಳಿಂದ ಆದಾಯ ತರುವಲ್ಲಿ ಸಾಕಷ್ಟು ಚರ್ಚಿಸಿದ್ದೇವೆ, ಎಲ್ಲೆಲ್ಲಿ ವೈನ್ ಶಾಪ್‌ಗಳಿಲ್ಲವೋ ಅಲ್ಲಲ್ಲಿ ಸಂಚಾರಿ ವೈನ್‌ಶಾಪ್ ( ಮೊಬೈಲ್ ಸರ್ವಿಸ್) ಮೂಲಕ ಉತ್ಕೃಷ್ಟ ಮದ್ಯ ಸರಬರಾಜಿಗೆ ಚಿಂತನೆ ಮಾಡಿದ್ದೇವೆ, ಮನೆಯ ಬಾಗಿಲಿಗೂ ಮದ್ಯ ಪೂರೈಕೆ ಮಾಡುವ ಕುರಿತಾಗಿಯೂ ಚರ್ಚೆಗೆ ಬಂದಿದೆ ಎಂದರು.
೨೦೧೮-೧೯ ರಲ್ಲಿ ೧,೯೭೫೦ ಸಾವಿರ ಕೋಟಿ ಗುರಿ ಇತ್ತು, ೧,೯೯೪೩ ಕೋಟಿ ಗುರಿ ಸಾಧಿಸಿದ್ದೇವೆ, ೨೦೧೯-೨೦ ನೇ ಸಾಲಿನಲ್ಲಿ ೨೧ ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ, ಗಾಂಜಾ ಮತ್ತು ಮಾದಕವಸ್ತು ಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದರು.
Advertisement
Post Views: 4
Continue Reading
Advertisement
Click to comment
















