ಟಾಪ್ ನ್ಯೂಸ್
ರೇವಣ್ಣ ಅರೆಸ್ಟ್ ಬೆನ್ನಲ್ಲೇ ಭವಾನಿ ರೇವಣ್ಣಗೂ ಸಂಕಷ್ಟ!

ಬೆಂಗಳೂರು : ಇಂದು ಕೋರ್ಟ್‌ಗೆ ರಜೆ ಕಾರಣ ನಾಳೆ ಎಸ್ಐಟಿ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ಪಡೆಯುವ ಅವಕಾಶವಿದೆ. ಈ ವೇಳೆ 2 ಕೇಸ್‌ಗಳ ಸಂಬಂಧ ಎಸ್ಐಟಿ ವಿಚಾರಣೆ ಮಾಡಲಿದೆ. ಎಡಿಜಿಪಿ ಬಿ.ಕೆ ಸಿಂಗ್ ಹಾಗೂ ತಂಡ ರೇವಣ್ಣ ಅವರ ವಿಚಾರಣೆ ಮಾಡಲಿದ್ದು, ಈಗಾಗಲೇ ಅಧಿಕಾರಿಗಳು ಹಲವು ಮಾಹಿತಿಯನ್ನ ಸಂಗ್ರಹಿಸಿದ್ದಾರಂತೆ.
ರೇವಣ್ಣ ವಿರುದ್ಧ ದಾಖಲಾಗಿರುವ ಕಿಡ್ನಾಪ್ ಸೆಕ್ಷನ್ಗಳು ತುಂಬಾನೇ ಸ್ಟ್ರಾಂಗ್ ಆಗಿವೆ. 364a ಸೆಕ್ಷನ್ ದಾಖಲಾಗಿದ್ದು, ಇದು ಸಾಬೀತಾದಲ್ಲಿ ಹತ್ತು ವರ್ಷದಿಂದ ಜೀವವಾಧಿ ಶಿಕ್ಷೆ ಆಗ್ಬೋದು. ಇನ್ನು ಸೆಕ್ಷನ್ 365ರ ಅಡಿಯಲ್ಲಿ ಅಪಹರಣ ಕೇಸ್ಗೆ ಸಂಬಂಧ ಪಟ್ಟಂತೆ ಮೂರರಿಂದ ಏಳು ವರ್ಷ ಶಿಕ್ಷೆ ಅಥವಾ ದಂಡವನ್ನೂ ವಿಧಿಸ್ಬೋದು.
ಮಹಿಳೆ ಅಪಹರಣದ ಪ್ರಕರಣದಲ್ಲಿ ರೇವಣ್ಣ ಬಂಧನವಾದ ಬೆನ್ನಲ್ಲೇ ಅವರ ಪತ್ನಿ ಭವಾನಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಭವಾನಿ ಕರೆಯುತ್ತೊದ್ದಾರೆಂದು ಸತೀಶ್ ಬಾಬು, ನನ್ನ ತಾಯಿಯನ್ನ ಕರೆದೊಯ್ದಿದ್ದರು ಅಂತಾ ಸಂತ್ರಸ್ತೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ರೇವಣ್ಣ ಕೇಸ್ನಲ್ಲಿ ಕಿಡ್ನಾಪ್ ಆಗಿದ್ದ ಮಹಿಳೆಯನ್ನ ಎಸ್ಐಟಿ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ರೇವಣ್ಣ ಪಿಎ ತೋಟದ ಮನೆಯಲ್ಲಿದ್ದ ಮಹಿಳೆಯನ್ನ ಅಧಿಕಾರಿಗಳು ರಕ್ಷಣೆ ಮಾಡ್ತಿದ್ದಂತೆ ಕಣ್ಣೀರು ಸುರಿಸಿದ್ದಾರಂತೆ. ತುಂಬಾನೇ ಭಯಗೊಂಡಿದ್ದರಿಂದ ಅಧಿಕಾರಿಗಳು ಏನೇ ಪ್ರಶ್ನೆ ಮಾಡಿದ್ರೂ ಕಣ್ಣೀರು ಸುರಿಸಿದ್ದಾರೆ. ಹೀಗಾಗಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದ್ದು, ಇನ್ನೋರ್ವ ಸಂತ್ರಸ್ತೆಯನ್ನೂ ಅಲ್ಲೇ ಬಿಟ್ಟಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?