Connect with us

ರಾಜಕೀಯ

ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ವಹ್ನಿಕುಲ ಕ್ಷತ್ರಿಯ ಗುರುಪೀಠದ ಪೂಜ್ಯ ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯ ಆಶೀರ್ವಾದ ಪಡೆದ ಡಾ.ಕೆ.ಸುಧಾಕರ್‌.

ಆದಿಪರಾಶಕ್ತಿ ಪೀಠಾಧಿಪತಿ ಹಾಗೂ ವಹ್ನಿಕುಲ ಕ್ಷತ್ರಿಯ ಜನಾಂಗದ ಸದ್ಗುರು ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳಿಂದ ಆಶೀರ್ವಾದತಿಗಳ ಸಮುದಾಯದಿಂದ ನಾಡಿಗೆ ವಿಶಿಷ್ಟ ಕೊಡುಗೆ ದೊರೆತಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಂದ ರೋಡ್‌ ಶೋ ಚಿಕ್ಕಬಳ್ಳಾಪುರ, ಏಪ್ರಿಲ್‌ 17, ಬುಧವಾರ

ಪ್ರಭು ಶ್ರೀ ರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತದ ಸಂಕಲ್ಪವೇ ಈ ಪ್ರಯತ್ನದ ಹೆಜ್ಜೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರನು ಅವತರಿಸಿದ ಪವಿತ್ರ ದಿನವೇ ಶ್ರೀರಾಮ ನವಮಿ. 500 ವರ್ಷಗಳ ವನವಾಸದ ನಂತರ ಪ್ರಭು ಶ್ರೀರಾಮಚಂದ್ರ ಈಗ ತನ್ನ ಜನ್ಮಭೂಮಿ ಅಯೋಧ್ಯೆಯಲ್ಲಿ, ತನ್ನ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ. ಈ ವರ್ಷದ ಶ್ರೀ ರಾಮ ನವಮಿ ಎಲ್ಲ ಭಾರತೀಯರಿಗೂ ಅತ್ಯಂತ ವಿಶೇಷ ದಿನ ಎಂದರು.

ಧರ್ಮ ವಿರೋಧಿಗಳ ಕುತಂತ್ರದಿಂದ ಪ್ರಭು ಶ್ರೀರಾಮ 500 ವರ್ಷಗಳ ಕಾಲ ಒಂದು ಸಣ್ಣ ಟೆಂಟ್‌ನಲ್ಲಿ ವನವಾಸ ಅನುಭವಿಸಬೇಕಾಯಿತು ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಶ್ರೀರಾಮನ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವುದು ಐನೂರು ವರ್ಷಗಳ ಹೋರಾಟದ ಫಲ. ಬಹುಶಃ ಇಡೀ ಜಗತ್ತಿನ ಇತಿಹಾಸದಲ್ಲಿ ಒಂದು ಧಾರ್ಮಿಕ ಕ್ಷೇತ್ರಕ್ಕೆ ಈ ಮಟ್ಟದ ನಿರಂತರ ವಿರೋಧ, ಹೋರಾಟ, ತ್ಯಾಗ, ಬಲಿದಾನ ಎಲ್ಲಿಯೂ ನಡೆದಿಲ್ಲ ಎಂದರು.

Advertisement

ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಿದ್ದಾರೆ. ಜೊತೆಗೆ ಹಿಂದೂ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರದು ಪರಂಪರೆಯ ತಳಹದಿಯಲ್ಲಿ ನವ ಭಾರತ ಕಟ್ಟುವ ಪ್ರಯತ್ನ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಅಂದರೆ ಕೇವಲ ನಗರೀಕರಣ ಅಥವಾ ಕೈಗಾರೀಕರಣ ಆಗಿರಬಹುದು. ಭಾರತದಲ್ಲಿ ಹಾಗಲ್ಲ ಸನಾತನ ಧರ್ಮವೇ ದೇಶದ ಆತ್ಮ. ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತದ ಆತ್ಮ ತನ್ನ ಧರ್ಮದಲ್ಲಿ ಅಡಗಿದೆ. ಇಲ್ಲಿ ಎಷ್ಟೇ ಅಭಿವೃದ್ಧಿ, ಆಧುನಿಕತೆ ಬಂದರೂ ಹಿಂದೂ ಧರ್ಮ, ಸನಾತನ ಸಂಸ್ಕೃತಿ, ಪರಂಪರೆಯ ಮುಂದುವರಿಕೆ ಇಲ್ಲದೆ ಅಭಿವೃದ್ಧಿ ಅರ್ಥ ಕಳೆದುಕೊಳ್ಳುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆದಿದ್ದಾರೆ. ಇದು ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳಿಸುವ ಹೆಜ್ಜೆ. ಶ್ರೀರಾಮನ ಆಡಳಿತದ ಆದರ್ಶಗಳನ್ನೇ ಪ್ರಧಾನಿ ಮೋದಿ ತಮ್ಮ ಆಡಳಿತದ ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಅಚ್ಚರಿ ಎನಿಸುವ ಮಟ್ಟಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಧರ್ಮರಕ್ಷಕ, ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೂ ರಾಮ ಮಾರ್ಗ ಎಂದು ಹೇಳಿದರು.

ರೋಡ್‌ ಶೋ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಮತ ಯಾಚಿಸಲು ರೋಡ್‌ ಶೋ ನಡೆಸಿದರು. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದಿಂದ ಆರಂಭವಾಗಿ ಸೌಂದರ್ಯ ಮಹಲ್‌ವರೆಗೆ ನಡೆದ ರೋಡ್‌ ಶೋನಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಪಾರ ಬೆಂಬಲ ತೋರಿದರು. ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವ ಹಾಗೂ ಕ್ಷೇತ್ರದಲ್ಲಿ ಕಮಲ ಅರಳಿಸುವ ಘೋಷಣೆ ಕೇಳಿಬಂತು.

ಅಭ್ಯರ್ಥಿ ಡಾ.ಕೆ.ಸುಧಾಕರ್‌ ಜೊತೆ ಶಾಸಕ ಧೀರಜ್‌ ಮುನಿರಾಜು ಹಾಜರಿದ್ದರು. ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯ ಭೇಟಿ ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ ಅಭ್ಯರ್ಥಿ ಡಾ.ಕೆ.ಸುಧಾಕರ್‌‌ ಭೇಟಿ ನೀಡಿದರು. ವಹ್ನಿಕುಲ ಕ್ಷತ್ರಿಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Advertisement

ನಂತರ ಮಾತನಾಡಿದ ಡಾ.ಕೆ.ಸುಧಾಕರ್‌, ಬೆಂಗಳೂರಿನ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವವನ್ನು ಪ್ರತಿ ವರ್ಷ ತಿಗಳ ಸಮುದಾಯದವರು ವಿಜೃಂಭಣೆಯಿಂದ ನಡೆಸುತ್ತಾರೆ. ಸುಪ್ರಸಿದ್ಧ ಲಾಲ್‌ಬಾಗ್ ಉದ್ಯಾನವನದ ನಿರ್ಮಾಣಕ್ಕೂ ತಿಗಳರ ಕೊಡುಗೆ ದೊಡ್ಡದಿದೆ. ಬೆಂಗಳೂರು ನಗರದ ಇತಿಹಾಸ ಹಾಗೂ ಪರಂಪರೆಗೆ ತಿಗಳ ಸಮುದಾಯ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಪವಿತ್ರವಾದ ಚೈತ್ರ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಗನ್ಮಾತೆ ಆದಿಶಕ್ತಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದು ನನ್ನಲ್ಲಿ ಹೊಸ ಶಕ್ತಿ, ಚೈತನ್ಯ ತುಂಬಿದೆ ಎಂದು ಹೇಳಿದರು.

ನಂತರ ದೇವನಹಳ್ಳಿ ತಾಲ್ಲೂಕಿನ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠಕ್ಕೆ ಭೇಟಿ ನೀಡಿ, ಪೀಠಾಧಿಪತಿ ಹಾಗೂ ವಹ್ನಿಕುಲ ಕ್ಷತ್ರಿಯ ಜನಾಂಗದ ಗುರು ಸದ್ಗುರು ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳ ಆಶೀರ್ವಾದ ಪಡೆದರು.

Uncategorized3 weeks ago

ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಕ್ಷೇತ್ರ ನಾಗಮಂಗಲದ ಕಲ್ಲೇನಹಳ್ಳಿಯಲ್ಲಿ ಗೋಮಾಳದ ₹25 ಕೋಟಿ ಮೌಲ್ಯದ ಬಂಡೆ ಲೂಟಿ?

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ