Featured
ಡಿಕೆಶಿ ಬಂಧನಕ್ಕೆ ಸಿದ್ದು, ಪರಮ್ ಆಕ್ರೋಶ : ಡಿಕೆಶಿ ಬೆಂಬಲಕ್ಕೆ ನಿಂತ ಕಾಂಗ್ರೆಸ್
![](https://risingkannada.com/wp-content/uploads/2019/09/dk-cong.jpeg)
ಬೆಂಗಳೂರು/ನವದೆಹಲಿ : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕೇಂದ್ರ ಸರ್ಕಾಋ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರ ಹಾಕಿದ್ಉದ, ಪ್ರತಿ ಕ್ಷಣ ಪ್ರತಿದಿನ, ವಿಪಕ್ಷ ನಾಯಕರೇ ಬಿಜೆಪಿ ಟಾರ್ಗೆಟ್. ಕೇಂದ್ರೀಯ ಸಂಸ್ಥೆಗಳ ಮೂಲಕ ವಿಪಕ್ಷಗಳ ನಾಯಕರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ ಎಂದು ಸಿದ್ದರಾಮಯ್ಯ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹದ್ಯೋಗಿ ಡಿ.ಕೆ.ಶಿವಕುಮಾರ್ ಅವರ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸಲಾಗದೆ ಅಧಿಕಾರ ದುರುಪಯೋಗದ ಮೂಲಕ ದಮನಿಸುವ ಯತ್ನ ಹೇಡಿತನದ್ದು. ಇಂತಹ ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಶಿವಕುಮಾರ್ ಬೆಂಬಲಕ್ಕಿದೆ.@INCKarnataka— Siddaramaiah (@siddaramaiah) September 3, 2019
ಬಿಜೆಪಿ ತನ್ನ ವೈಫಲ್ಯಗಳನ್ನ ಮರೆ ಮಾಚಲು, ದ್ವೇಷದ ರಾಜಕಾರಣ ಮಾಡುತ್ತಿದೆ. ಡಿಕೆ ಶಿವಕುಮಾರ್ ಶೀಘ್ರವೇ ಹೊರ ಬರಲಿದ್ದಾರೆ. ಯಾವುದೇ ಆರೋಪಗಳಿಲ್ಲದೆ ಡಿಕೆಶಿ ಹೊರಬರಲಿದ್ದು, ನಾವು ಯಾವಾಗಲು ಡಿಕೆಶಿ ಜೊತೆ ಇರುತ್ತೇವೆ ಎಂದು ಸಿದ್ದು ತಿಳಿಸಿದ್ದಾರೆ.
ಇತ್ತ ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡರಾದ ಪರಮೇಶ್ವರ್ ಕೂಡ ಡಿಕೆ
ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬಂಧನ
ಸಂಪೂರ್ಣ ರಾಜಕೀಯ ಪ್ರೇರಿತ. ರಾಜಕೀಯ ದಾಳಕ್ಕಾಗಿ ಡಿಕೆಶಿಯನ್ನ ಬಲಿ ಮಾಡಲಾಗಿದೆ. ನಮಗೆ ನ್ಯಾಯಾಂಗದ
ಮೇಲೆ ವಿಶ್ವಾಸವಿದ್ದು, ಇದರಲ್ಲಿ ಡಿಕೆಶಿಗೆ ನ್ಯಾಯ ಸಿಗಲಿದೆ ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ
. We have witnessed an absolute exploitation of power with the arrest of @DKShivakumar.
Shri @DKShivakumar has been arrested despite full co-operation from him for days. He is a victim of 'political vendetta'.
We trust our judiciary and I am sure justice will be served.— Dr. G Parameshwara (@DrParameshwara) September 3, 2019
ಮತ್ತೊಂದೆಡೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕೂಡ, ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ನ ಚಿದಂಬರಂ ಬಳಿಕ ಈಗ ಡಿಕೆಶಿ ಅವರನ್ನ ಬಂಧಿಸಿರೋದು ದುರುದ್ದೇಶ ಪೂರಿತವಾಗಿದೆ ಅನ್ನೋದನ್ನ ಬಿಜೆಪಿ ಜಗಜ್ಜಾಹೀರು ಮಾಡಿದೆ ಎಂದು ವೇಣುಗೋಪಾಲ್ ಆಕ್ರೋಶ ಹೊರಹಾಕಿದ್ದಾರೆ.
The arrest of @DKShivakumar is a clear case of political vendetta by the fascist government at the centre. After Shri.Chidambaram, yet another leader facing vengeance for standing up against the horse trading and petty politics of the @BJP4India.— K C Venugopal (@kcvenugopalmp) September 3, 2019
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?