ರಾಜಕೀಯ
ಶಿವಮೊಗ್ಗದಿಂದ ಗೀತಕ್ಕ ಚುನಾವಣಾ ರಂಗಪ್ರವೇಶ…ಬೆನ್ನಿಗೆ ನಿಲ್ಲುತ್ತಂತೆ ಸ್ಯಾಂಡಲ್ ವುಡ್.!
![](https://risingkannada.com/wp-content/uploads/2024/03/geethashivaraj.png)
ಶಿವಮೊಗ್ಗ : ಹೈವೋಲ್ಟೇಜ್ ಕಣವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಮಹಾಯುದ್ಧಕ್ಕೆ ಮತ್ತೊಮ್ಮೆ ಅಖಾಡ ಸಿದ್ಧವಾಗಿದ್ದು, ಗೆಲುವೊಂದೇ ಮಾನದಂಡವಾಗಿದೆ. ಕಳೆದ ಬಾರಿ ಬಿ ವೈ ರಾಘವೇಂದ್ರ ಎದುರು ಸೋಲಿನ ರುಚಿ ಕಂಡಿರುವ ಗೀತಾ ಶಿವರಾಜ್ ಕುಮಾರ್, ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಹೀಗಾಗಿ ಈ ಬಾರಿ ಗೆಲಲ್ಲೇ ಬೇಕೆಂಬ ಹಠಕ್ಕೆ ಬಿದ್ದಿರೋ ಗೀತಾ ಶಿವರಾಜ್ ಕುಮಾರ್ ಗೆ ಪತಿ ಶಿವರಾಜ್ ಕುಮಾರ್ ಮತ್ತು ಸಹೋದರ ಸಚಿವ ಮಧುಬಂಗಾರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ಜೊತೆಗೆ ದೊಡ್ಮನೆ ಅಂದರೆ ಸ್ಯಾಂಡಲ್ ವುಡ್ ಗೂ ಅವಿನಾಭಾವ ಸಂಬಂಧ ಹೀಗಾಗಿ, ಗೀತಕ್ಕನ ಗೆಲ್ಲಿಸಲು ನಾವು ಬರುತ್ತೇವೆ ಅಂತ ಚಂದನವನದ ಹಲವು ಮಂದಿ ಟೊಂಕ ಕಟ್ಟಿ ನಿಂತಿದ್ದಾರೆ.
ಈ ಬಗ್ಗೆ ನಟ ಶಿವರಾಜ್ ಕುಮಾರ್ ಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಲವು ನಟ, ನಟಿಯರು ಗೀತ ಶಿವರಾಜ್ ಕುಮಾರ್ ಪರವಾಗಿ ಪ್ರಚಾರ ನಡೆಸುವ ಸಾಧ್ಯತೆಯೂ ಇದೆ. ಅಲ್ಲದೇ ಹಲವು ನಿರ್ಮಾಪಕರು, ನಿರ್ದೇಶಕರು ಪ್ರಚಾರದ ಅಖಾಡಕ್ಕೆ ಧುಮುಕಲಿದ್ಧಾರೆ. ಗೀತಾಶಿವರಾಜ್ ಕುಮಾರ್ ಪರವಾಗಿ ಕ್ಯಾಂಪೇನ್ ಪ್ಲಾನ್ ಗಳನೆಲ್ಲ ಮಧುಬಂಗಾರಪ್ಪ ನಿರ್ವಹಿಸುತ್ತಿದ್ದು, ಸೆಲೆಬ್ರಿಟಿಗಳ ಪ್ರಚರಾದ ವೇಳಾಪಟ್ಟಿಯನ್ನ ಅವರೆ ನಿರ್ಧರಿಸಲಿದ್ದಾರೆ.
ಒಟ್ಟಾರೆ ಪ್ರತಿ ಬಾರಿಯಂತೆ ಈ ಬಾರಿಯೂ ಶಿವಮೊಗ್ಗ ಕ್ಷೇತ್ರ ರಂಗೇರಲಿದ್ದು, ಈ ಬಾರಿಯು ತುಸು ಹೆಚ್ಚಾಗಿಯೇ ಕಳೆಕಟ್ಟಲಿದೆ. ಇಡೀ ಸ್ಯಾಂಡಲ್ ವುಡ್ಡೇ ಮಲೆನಾಡಿಗೆ ದಾಂಗುಡಿ ಇಡುವುದಂತು ಪಕ್ಕಾ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?