ಬೆಂಗಳೂರು
ಬಿಜೆಪಿಗೆ ‘ಒಬಿಸಿ’ ಶಾಕ್ : ಫಸ್ಟ್ ಲಿಸ್ಟ್ ಬೆನ್ನಲ್ಲೇ ಬಂಡಾಯ ಸ್ಫೋಟ!
![](https://risingkannada.com/wp-content/uploads/2024/03/iswarappaa.png)
Bengalore : ರಾಜ್ಯ ಬಿಜೆಪಿ ಪಾಳೆಯದಲ್ಲಿ ಫಸ್ಟ್ ಲಿಸ್ಟ್ ಅನೌನ್ಸ್ ಆದ ಬೆನ್ನಲ್ಲೇ ಮುನಿಸುಗಳು ಪ್ರಾರಂಭವಾಗಿದೆ. ಅದ್ರಲ್ಲೂ ಇದೀಗ ಬಿಜೆಪಿಗೆ ಒಬಿಸಿ ಬಂಡಾಯ ಬಿಸಿ ತುಪ್ಪದಂತಾಗಿದೆ. ಉಗುಳುವಂತೆಯೂ ಇಲ್ಲ..ನುಂಗುವಂತೆಯೂ ಇಲ್ಲ ಎಂಬ ಸ್ಥಿತಿ ಬಿಜೆಪಿಗೆ ಎದುರಾಗಿದೆ. ಅದ್ರಲ್ಲೂ ಶಿವಮೊಗ್ಗದಲ್ಲಿ ಈಶ್ವರಪ್ಪ ಬಹಿರಂಗವಾಗಿ ಆಕ್ರೋಶ ಹೊರ ಹಾಕಿ ಬೇಕಂತಲೇ ಸಮುದಾಯಕ್ಕೆ ಟಿಕೆಟ್ ಕಡೆಗಣಿಸಲಾಗಿದೆ ಎಂಬ ಹೇಳಿಕೆ ಬಿಜೆಪಿ ಪಾಳೆಯದಲ್ಲಿ ಒಳಬೇಗುದಿ ಹೆಚ್ಚಾಗುವಂತೆ ಮಾಡಿದೆ.
ಕುರುಬರು ಮತ್ತು ಉಪ್ಪಾರ ಸಮುದಾಯಯದ ಸ್ವಾಮೀಜಿಗಳು ಬೀದಿಗಿಳಿದು ಟಿಕೆಟ್ ಕೇಳಿದ್ದರು. ಆದರೂ ಕೆಲ ನಾಯಕರ ಜಾತಿ ಲಾಬಿಯಿಂದ ಅರ್ಹ ಒಬಿಸಿ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದಲ್ಲಿ ಹಲವು ಒಬಿಸಿ ಅಕಾಂಕ್ಷಿಗಳಿದ್ದರೂ ಕೂಡ ಬೇಕು ಅಂತಲೇ ಒಬಿಸಿ ಸಮುದಾಯನ್ನ ರಾಜ್ಯ ನಾಯಕರು ನಿರ್ಲಕ್ಷಿಸಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
![](https://risingkannada.com/wp-content/uploads/2024/03/bjp.png)
ಇದುವರೆಗೂ ದೇಶದ ಅಭಿವೃದ್ದಿಗೆ ಪಣತೊಟ್ಟಿರುವ ಮೋದಿ ಮುಖ ನೋಡಿ ಒಬಿಸಿ ಸಮುದಾಯ ಬಿಜೆಪಿಯನ್ನ ಬೆಂಬಲಿಸಿತ್ತು. ಆದ್ರೆ ರಾಜ್ಯ ಬಿಜೆಪಿಯ ಕೆಲ ನಾಯಕರ ಜಾತಿವಾದಿ ಮನಸ್ಥಿತಿಯಿಂದ, ಒಬಿಸಿ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿದೆ ಎಂಬ ಕೂಗು ಕೇಳಿ ಬರುತ್ತಿದೆ. ಉತ್ತರಕರ್ನಾಟಕದಲ್ಲಿ ಒಬಿಸಿ ಸಮುದಾಯದ ಮತಗಳು ಕೈ ತಪ್ಪುವ ಭೀತಿ ಎದುರಾಗಿದ್ದು, ಕುರುಬರು, ಉಪ್ಪಾರರು, ಯಾದವರು ಹೀಗೆ ಯಾವ ಸಮುದಾಯಕ್ಕೂ ಟಿಕೆಟ್ ಸಿಕ್ಕಿಲ್ಲ. ಕೇವಲ ಜಾತಿವಾದಿ ಲೀಡರ್ ಗಳು ತಮಗೆ ಮತ್ತು ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ.
ಸಣ್ಣ ಪುಟ್ಟ ಜಾತಿಗಳ ನಾಯಕರನ್ನು ಬೆಳಸಬೇಕು. ಬಿಜೆಪಿ ಪಕ್ಷ ಕೆಲವೇ ಜಾತಿಗಳ ಹಿಡಿತಕ್ಕೆ ಸಿಲುಕಬಾರದು ಎಂಬುದು ವಾಸ್ತವ.. ಬೇಕಂತಲೇ ಒಬಿಸಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಮಾಡಲಿದೆ. ಕೂಡಲೇ ವರಿಷ್ಟರು ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಬಿಸಿ ಸಮುದಾಯದ ಮತಗಳು ಟರ್ನ್ ಆಗೋದು ಡೌಟ್
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?