Uncategorized
ಶಿವಮೊಗ್ಗದಲ್ಲಿ ಗೀತಕ್ಕಗೆ ಲಾಟರಿ.. BSY ಕುಟುಂಬಕ್ಕೆ ಗುನ್ನಾ..?
![](https://risingkannada.com/wp-content/uploads/2024/03/geethashivarajkumar.png)
ಶಿವಮೊಗ್ಗ : ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದ ಹಣಾಹಣಿಯಲ್ಲಿ ಈ ಬಾರಿ ರೋಚಕ ತಿರುವು ಸಿಕ್ಕಿದೆ. ಬಿಎಸ್ವೈ ಕುಟುಂಬಕ್ಕೆ ಮತ್ತೆ ಸೆಡ್ಡು ಹೊಡೆದಿರುವ ಡಾ. ರಾಜ್ ಕುಮಾರ್ ಸೊಸೆ ಭಾರಿ ಸದ್ದು ಮಾಡ್ತಿದ್ದಾರೆ. ಬಿ.ವೈ ರಾಘವೇಂದ್ರ ಮಣಿಸಲು ಈ ಬಾರಿ ಬಂಗಾರಪ್ಪರ ಮಗಳ ಪ್ರತಿಜ್ನೇ ಮಾಡಿದ್ದಾರೆ.
ಈ ಬಾರಿ ಪಾರ್ಲಿಮೆಂಟಿಗೆ ಹೋಗಲು ಅಪ್ಪು ಪ್ರೀತಿಯ ಅತ್ತಿಗೆ ಗೀತಾ ರೆಡಿಯಾಗಿದ್ದು, ಹ್ಯಾಟ್ರಿಕ್ ಹೀರೋ ಪತ್ನಿಗೆ ಈ ಸಲ ದಿಲ್ಲಿ ಗದ್ದುಗೆ ಭಾಗ್ಯ ಬಹುತೇಕ ಫಿಕ್ಸ್ ಎಂದು ಕ್ಷೇತ್ರದ ಜನ ಮಾತಾಡ್ತಿದ್ದಾರೆ. ಮತ್ತೆ ದೊಡ್ಮನೆ ಸೊಸೆ ಕಣಕ್ಕಿಳಿಸಿ ಡಿಕೆ ಶಿವಕುಮಾರ್ ರಣತಂತ್ರ ಹೆಣೆದಿದ್ದು ಕೂಡಾ ಫಲ ಕೊಡುವ ಲಕ್ಷಣಗಳಿವೆ.
ಈ ಬಾರಿ ಗೀತಾ ಶಿವರಾಜ್ ಕುಮಾರ್ಗೆ ಗೆಲುವಿನ ಸಾಧ್ಯತೆಗಳು ಹೆಚ್ಚು ಎನ್ನಲಾಗ್ತಿದೆ. ಬಿಎಸ್ವೈ ಕುಟುಂಬದ ವಿರುದ್ಧ ಹಳೆ ಹುಲಿ ಈಶ್ವರಪ್ಪ ಸೆಡ್ಡು ಹೊಡೆದಿರುವುದು. ಪಕ್ಷೇತರ ಸ್ಪರ್ಧೆ ಮೂಲಕ ರಾಘವೇಂದ್ರ ಸೋಲಿಸುವುದಾಗಿ ಘೋಷಿಸಿರುವುದು ಜತೆಗೆ ಗೀತಕ್ಕಗೆ ಕಳೆದ ಬಾರಿ ಸೋಲಿನ ಅನುಕಂಪ ಇರುವುದು ಪ್ಲಸ್ ಪಾಯಿಂಟ್ ಗಳಾಗಿವೆ. ಬಿಜೆಪಿಯಲ್ಲಿ ಗೊಂದಲ, ಕಾಂಗ್ರೆಸ್ನಲ್ಲಿ ಹುಮ್ಮಸ್ಸು, ಗೀತಕ್ಕ ಫೇಮಸ್ಸು ಎಂಬಂತಾಗಿದೆ.
ಗೀತಾ ಶಿವರಾಜ್ ಕುಮಾರ್ ಅವರ ತಮ್ಮ ಮಧು ಬಂಗಾರಪ್ಪ ಸಿದ್ದು ಸರ್ಕಾರದ ಪ್ರಭಾವಿ ಮಂತ್ರಿಯಾಗಿದ್ದಾರೆ. ಮತ್ತೊಬ್ಬ ಸಹೋದರ ಕುಮಾರ್ ಬಂಗಾರಪ್ಪಗೂ ಕೂಡಾ ಗೀತಕ್ಕನ ಮೇಲೆ ಪ್ರೀತಿಯಿದೆ. ಈ ಎಲ್ಲಾ ಸೇರಿ ಈ ಬಾರಿ ದೊಡ್ಮನೆಗೆ ರಾಜಕೀಯ ಯೋಗ ಒಲಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?