ಸಿನಿಮಾ
ಇಡೀ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನಾಚುವ ನಟ ಇವರೇ ಅಂತೆ!

Cinema : ಇಡೀ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿ ನಾಚಿಕೊಳ್ಳುವ ನಟ ಯಾರು ಗೊತ್ತಾ? ನಾಚ್ಕೊಳ್ತಾ ನಾಚ್ಕೊಳ್ತಾ 44 ಆದರೂ ಸಿಂಗಲ್ ಆಗಿಯೇ ಉಳಿದಿದ್ದಾರೆ ಇವರು. ಸೌತ್ ಚಿತ್ರರಂಗದ ಈ ನಟನಿಗೆ ತುಂಬಾ ನಾಚಿಗೆಯಂತೆ. ಆದರೂ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿ ನಟಿಸ್ತಾರೆ, ಲವ್ ಸೀನ್ ಮಾಡುತ್ತಾರೆ, ನಟಿಯರ ಜೊತೆ ಆರಾಮವಾಗಿ ಸ್ಕ್ರೀನ್ ಶೇರ್ ಕೂಡಾ ಮಾಡುತ್ತಾರೆ. ಆದರೆ ರಿಯಲ್ ಲೈಫ್ನಲ್ಲಿ ತುಂಬಾ ನಾಚಿಗೆ ಇವರಿಗೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ಪ್ರಭಾಸ್. ಹೌದು ಪ್ರಭಾಸ್ ಅವರ ನಾಚಿಗೆ ತೆಲುಗು ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಬೇರೆ ಇಂಡಸ್ಟ್ರಿಗಳಲ್ಲಿಯೂ ಫೇಮಸ್. ಏನಾದರೂ ಮದುವೆ, ಲವ್ ಬಗ್ಗೆ ಕೇಳಿದರೆ ಸಾಕು ಈ ನಟ ನಾಚಿ ನೀರಾಗಿಬಿಡುತ್ತಾರೆ. ಇದು ಹಲವು ಸಲ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಟ ಪ್ರಭಾಸ್ ಅವರು ಸಿನಿಮಾ ಪ್ರಮೋಷನ್ ಮಾಡುವಾಗ, ಅಥವಾ ಬೇರೆ ಸಿನಿಮಾಗಳ ಪ್ರಮೋಷನ್ಗೆ ಹೋದಾಗ ಯಾರಾದರೂ ತಮ್ಮ ಮದುವೆ, ಲವ್ ಲೈಫ್ ಬಗ್ಗೆ ಕೇಳಿದರೆ ಸಾಕಪ್ಪಾ ಸಿಕ್ಕಾಪಟ್ಟೆ ನಾಚಿಕೆ ಪಟ್ಟುಕೊಳ್ಳುತ್ತಾರೆ. ಇದು ಹಲವಾರು ಸಲ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಭಾಸ್ ಅವರನ್ನು ಅವಾರ್ಡ ಫಂಕ್ಷನ್ಗಳಲ್ಲಿ ವೇದಿಕೆಗೆ ಕರೆದು ಅವರ ಸುತ್ತ ಡ್ಯಾನ್ಸರ್ಸ್ ಡ್ಯಾನ್ಸ್ ಮಾಡಿದರೆ ಪ್ರಭಾಸ್ ಕೈಕಟ್ಟಿಕೊಂಡು ನಿಲ್ಲುತ್ತಾರೆ. ತಲೆ ತಗ್ಗಿಸಿ ಭರ್ಜರಿಯಾಗಿ ನಾಚಿಕೊಳ್ಳುತ್ತಾರೆ. ಅವರ ನಾಚಿಗೆಗೆ ಅಪಾರ ಅಭಿಮಾನಿಗಳಿದ್ದಾರೆ.
ಅವಾರ್ಡ್ ಕೊಡುವಾಗಲೋ, ಸ್ವೀಕರಿಸಲೋ ಪ್ರಭಾಸ್ ಅವರು ವೇದಿಕೆಯಲ್ಲಿದ್ದರೆ ಅವರು ಹೆಣ್ಣುಮಕ್ಕಳನ್ನು ಅವಾಯ್ಡ್ ಮಾಡುವ ಬಗೆ ನೋಡಿ ಜನಸಾಮಾನ್ಯರಷ್ಟೇ ಅಲ್ಲ ಪ್ರಸಿದ್ಧ ನಿರ್ದೇಶಕ ಎಸ್ಎಸ್ ರಾಜಮೌಳಿ, ನಟಿ ತಮನ್ನಾ ಸೇರಿ ಚಿತ್ರರಂಗದ ಗಣ್ಯರೂ ಬಿದ್ದೂ ಬಿದ್ದು ನಕ್ಕಿದ್ದಾರೆ.
ನಾರ್ಮಲ್ ಆಗಿ ಸಿನಿಮಾವನ್ನು ಬಿಟ್ಟರೆ ಬೇರೆ ಯಾವುದೇ ಕ್ಯಾಮೆರಾ ಮುಂದೆ ಬಂದಾಗಲೂ ಪ್ರಭಾಸ್ ನಾಚಿ ನೀರಾಗುವ ಪರಿ ನೋಡುವುದೇ ಚಂದ. ಸಿನಿಮಾ ಪ್ರಮೋಷನ್ಗೆ ಬಂದಾಗ ಅಥವಾ ಬೇರೆ ಇವೆಂಟ್ಗೆ ಬಂದಾಗ ನಟ ಪ್ರಭಾಸ್ ಅವರು ವಿಪರೀತ ನಾಚಿಕೊಳ್ತಾರೆ. ಇಡೀ ಚಿತ್ರರಂಗದಲ್ಲಿ ತುಂಬಾ ನಾಚಿಕೊಳ್ಳೋ ನಟ ಇವರೇ ಅಂತೆ.
ಪ್ರಭಾಸ್ ಅವರು ಸದ್ಯ ಕಲ್ಕಿ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ನಂತರ ಪ್ರಭಾಸ್ ಸದ್ಯ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಹಿಂದಿ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಮೇಲಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ವಿಶ್ವನಾಯಕ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಎನ್ ಟಿಆರ್ ಹಾಗೂ ನಾನಿ ಕೂಡ ನಟಿಸುತ್ತಿದ್ದಾರೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?