Featured
ಭಾರತೀಯ ಸೇನೆಗೆ 8 ಅಪಾಚೆ ಯುದ್ಧ ಹೆಲಿಕಾಪ್ಟರ್ : ಪಾಕಿಸ್ತಾನಕ್ಕೆ ಢವ ಢವ..! ಅಪಾಚೆ ವಿಶೇಷತೆಗಳೇನು ಗೊತ್ತಾ..?
ನವದೆಹಲಿ : ಅಮೆರಿಕ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಅಪಾಚೆಈಗ ಭಾರತೀಯ ವಾಯುಪಡೆ ಸೇರ್ಪಡೆಯಾಗಿವೆ. ಸದ್ಯ ಒಟ್ಟು 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳು ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಸೇರ್ಪಡೆಯಾದವು. ವಾಯುಸೇನೆ ಮುಖ್ಯಸ್ಥ ಬಿಎಸ್. ಧನೋವಾಗೆ ಬೋಯಿಂಗ್ಇಂಡಿಯಾ ಅಧ್ಯಕ್ಷ ಸಲೀಲ್ ಗುಪ್ತೆ, 8 ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಹಸ್ತಾಂತರಿಸಿದ್ರು.
ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನ ಸ್ವೀಕರಿಸಿ ಮಾತನಾಡಿದಧನೋವಾ, ಅಪಾಚೆ,ವಿಶ್ವದ ಪ್ರಬಲ ಯುದ್ಧ ಹೆಲಿಕಾಪ್ಟರ್. ಏಕಕಾಲದಲ್ಲಿ ವಿವಿಧ ಬಗೆಯ ಯೋಜನೆಗಳನ್ನ ನಿರ್ವಹಿಸೋ ಶಕ್ತಿ ಈ ಹೆಲಿಕಾಪ್ಟರ್ಗಳಿವೆ ಇದೆ. ಅಪಾಚೆ ಎಹೆಚ್ 64ಇ, ನಮ್ಮ ಸೇನೆಸೇರಿದ್ದರಿಂದ ವಾಯುಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆಎಂದರು.
ಅಪಾಚೆ ಹೆಲಿಕಾಪ್ಟರ್ಗಳ ವಿಶೇಷತೆಗಳೇನು..?
ರಾಕೆಟ್ ಮತ್ತು ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಇದೆ
ನಿಖರ ಮತ್ತು ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಶಕ್ತಿ
ಪ್ರತಿಕೂಲ ಅಂದ್ರೆ ಭಾರೀ ಮಳೆ, ಬಿರುಗಾಳಿ ಸಂದರ್ಭದಲ್ಲಿ ಅಡೆತಡೆಇಲ್ಲದೆ ಕಾರ್ಯಾಚರಣೆ
ಪರ್ವತ ಪ್ರದೇಶ, ಮಂಜಿನ ಪ್ರದೇಶದಲ್ಲೂ ಕಾರ್ಯಾಚರಣೆ ಸಾಮರ್ಥ್ಯ
ಗುಡ್ಡಗಾಡು, ಬೆಟ್ಟ ಪ್ರದೇಶ, ಕಡಿದಾದ ಪ್ರದೇಶದಲ್ಲಿ ಇಳಿಯುವ ಶಕ್ತಿ ಇದೆ
ಯುದ್ಧ ಭೂಮಿಯಿಂದ ವಾರ್ ರೂಂಗಳಿಗೆ ಫೋಟೋ ತೆಗೆದು ಕಳಿಸುವಶಕ್ತಿ
ಪ್ರಕೃತಿ ವಿಕೋಪ, ಪ್ರವಾಹದಂತಹ ಸಂದರ್ಭದಲ್ಲಿ ಅಪಾಚೆಉಪಯೋಗಕ್ಕೆ ಬರುತ್ತೆ
ಒಟ್ಟಿನಲ್ಲಿ ಅಪಾಚೆ ಆಗಮನದಿಂದ ಒಂದೆಡೆ ಭಾರತೀಯ ವಾಯುಸೇನೆಸಾಮರ್ಥ್ಯ ಹೆಚ್ಚಾಗಿದ್ರೆ, ಮತ್ತೊಂದೆಡೆ ನೆರೆಯ ಪಾಕಿಸ್ತಾನ ಮತ್ತುಚೀನಾಗೆ ಭಯ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?