Featured
ಏರ್ ಚೀಫ್ ಮಾರ್ಷಲ್‌ನೊಂದಿಗೆ ಮಿಗ್ ೨೧ ಏರಿ, ನಭಕ್ಕೆ ಹಾರಿದ ಅಭಿನಂದನ್, ಇವರಿಬ್ಬರಲ್ಲೂ ಸಾಕಷ್ಟು ಸಾಮ್ಯತೆ ಏನದು..?

ನವದೆಹಲಿ/ ಪಠಾನ್ ಕೋಟ್ : ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಗಡಿರೇಖೆ ಪ್ರವೇಶಿಸಿ ಪಾಕ್ ನೆಲೆಯ ಮೇಲೆ ದಾಳಿ ನಡೆಸಿ ಸೆರೆಯಾಗಿದ್ದ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ -೨೧ ವಿಮಾನವನ್ನ ವಾಯುಸೇನಾ ಮುಖ್ಯಸ್ಥ ಬಿಎಸ್ ಧನೋವಾರೊಂದಿಗೆ ಹಾರಿಸಿದ್ದಾರೆ.

ಪಠಾನ್ ಕೋಟ್ ವಾಯುನೆಲೆಯಿಂದ ನಭಕ್ಕೆ ಹಾರಿದವರು ಅರ್ಧಗಂಟೆಯ ನಂತರ ಲ್ಯಾಂಡ್ ಆದರು. ಕರ್ತವ್ಯಕ್ಕೆ ಹಾಜರಾಗಿ ಹತ್ತು ದಿನಗಳ ನಂತರ ಮಿಗ್ ಯುದ್ಧ ವಿಮಾನವನ್ನ ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಧನೋವಾ ಕೆಲವು ಸ್ವಾರಸ್ಯಕರವಾದ ಇಬ್ಬರ ನಡುವಿನ ಸಾಮ್ಯತೆಯನ್ನ ಹಂಚಿಕೊಂಡಿದ್ದಾರೆ. ಇಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ, ಇಬ್ಬರೂ ವಿಮಾನದಿಂದ ನೆಗೆದಿದ್ದೇವೆ, ನಾನು ಕಾರ್ಗಿಲ್ ಆದರೆ ಅಭಿನಂದನ್‌ದ್ದು ಬಾಲಕೋಟ್ ನಂತರದ ದಾಳಿ. ಅಭಿನಂದನ್ ತಂದೆಯ ಜೊತೆ ಕೆಲಸ ಮಾಡಿರುವುದೂ ನನ್ನ ಹೆಮ್ಮೆಯ ವಿಷಯ ಎಂದಿದ್ದಾರೆ
Post Views: 7
Continue Reading
Advertisement
Click to comment
















